ವಿಧಾನಸೌಧಕ್ಕೆ ವೇಣುಗೋಪಾಲ್ ಪ್ರವೇಶಕ್ಕೆ ಅಡ್ಡಿ ; ಉಗ್ರಪ್ಪ ಗರಂ
Update: 2018-05-19 14:27 IST
ಬೆಂಗಳೂರು, ಮೇ 19: ವಿಧಾನಸಭೆಯ ಲಾಂಚ್ ಗೆ ಆಗಮಿಸಿದ ಕೆಪಿಸಿಸಿ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ಮಾರ್ಷಲ್ ಗಳು ಅಡ್ಡಿಪಡಿಸಿದಕ್ಕಾಗಿ ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯ ಲಾಂಜ್ ಗೆ ಆಗಮಿಸಿದ ವೇಣುಗೋಪಾಲ್ ಅವರಿಗೆ ಮಾರ್ಷಲ್ ಗಳು ಅಡ್ಡಿಪಡಿಸಿದರು ಎನ್ನಲಾಗಿದೆ. ಆಗ ಉಗ್ರಪ್ಪ ಅವರು “ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರನ್ನು ಹೇಗೆ ಬಿಟ್ಟಿದ್ದೀರಿ ? ಸಂಸದ ವೇಣುಗೋಪಾಲ್ ಗೆ ಯಾಕೆ ಪ್ರವೇಶ ನೀಡಿಲ್ಲ ಎಂದು ಮಾರ್ಷಲ್ ಗಳನ್ನು ತರಾಟೆಗೆ ತೆಗೆದುಕೊಂಡರು .ಬಳಿಕ ಲಾಂಜ್ ಗೆ ಮಾರ್ಷಲ್ ಗಳು ಪ್ರವೇಶ ನೀಡಿದರು ಎಂದು ತಿಳಿದು ಬಂದಿದೆ