ವಿಶ್ವಾಸಮತಯಾಚನೆ: ನೇರ ಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ಆದೇಶ

Update: 2018-05-19 09:43 GMT

ಹೊಸದಿಲ್ಲಿ, ಮೇ 19: ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸುವುದನ್ನು ನೇರ ಪ್ರಸಾರ ಮಾಡುವಂತೆ ಸುಪ್ರೀಂ ಕೋರ್ಟ್ ಶನಿವಾರ ಆದೇಶಿಸಿದೆ.

ಸಂಜೆ ನಾಲ್ಕು ಗಂಟೆಗೆ ಬಹುಮತ ಸಾಬೀತು ನಡೆಯಲಿದೆ.

ಕಲಾಪದ ಪಾರದರ್ಶಕತೆ ಕಾಪಾಡಲು ಬಹುಮತ ಸಾಬೀತುಪಡಿಸುವುದನ್ನು ನೇರ ಪ್ರಸಾರ ಮಾಡುವುದು ಉತ್ತಮ ದಾರಿ ಎಂದು ಎ.ಕೆ. ಸಿಕ್ರಿ, ಎಸ್.ಎ. ಬೊಬ್ಡೆ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ಪೀಠ ಹೇಳಿದೆ.

 ಬಹುಮತ ಸಾಬೀತುಪಡಿಸುವ ಸಂದರ್ಭ ಇತರ ಕಲಾಪದಲ್ಲಿ ಇತರ ಯಾವುದೇ ಕಾರ್ಯಕ್ರಮಗಳು ಇರಬಾರದು ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.

ಸದನದ ಕಲಾಪವನ್ನು ಶಾಸಕಾಂಗ ಸಭೆಯ ಕಾರ್ಯದರ್ಶಿ ದಾಖಲಿಸಿಕೊಳ್ಳಬೇಕು ಎಂದು ಪೀಠ ಹೇಳಿದೆ.

 ಕಲಾಪವನ್ನು ಪ್ರಸಾರ ಮಾಡಲು ಹಲವು ಸ್ಥಳೀಯ ಚಾನೆಲ್‌ಗಳಿಗೆ ಅವಕಾಶ ನೀಡಬೇಕು. ಆಗ ಅವು ಕಲಾಪವನ್ನು ಏಕಕಾಲದಲ್ಲಿ ಪ್ರಸಾರ ಮಾಡಲು ಸಾಧ್ಯ ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News