ದಲಿತರ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ: ಭೀಮ ಸೇನಾ ಅಧ್ಯಕ್ಷನ ವಿರುದ್ಧ ಎನ್‌ಎಸ್‌ಎ ಹೇರಿಕೆ
Update: 2018-05-19 19:05 IST
ಮುಝಫ್ಫರನಗರ,ಮೇ 19: ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಎ.2ರಂದು ದೇಶವ್ಯಾಪಿ ನಡೆದಿದ್ದ ದಲಿತ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಮುಝಫ್ಫರ್ನಗರ ಜಿಲ್ಲಾ ಭೀಮ ಸೇನಾ ಅಧ್ಯಕ್ಷ ಉಪಕಾರ್ ಬಾವ್ರಾ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿ ಪ್ರಕರಣವನ್ನು ದಾಖಲಿಸಲಾಗಿದೆ.
ಜಿಲ್ಲೆಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಬಾವ್ರಾ ವಿರುದ್ಧ ದಂಗೆ ಮತ್ತು ಹಿಂಸಾಚಾರವನ್ನು ಪ್ರಚೋದಿಸಿದ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ರಾಜೀವ್ ಶರ್ಮಾ ಅವರು ತಿಳಿಸಿದ್ದಾರೆ. ಬಾವ್ರಾ ಎ.13ರಂದು ಮುಝಫ್ಫರನಗರದ ನ್ಯಾಯಾಲಯ ವೊಂದರಲ್ಲಿ ಶರಣಾಗತರಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರತಿಭಟನೆಗೆ ಸಂಬಂಧಿಸಿದಂತೆ ಮುಝಫ್ಫರನಗರ ಪೊಲೀಸರು 40ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದು,90ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದರು.