ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ: ಮೂವರು ಸಿಪಿಎಂ ಕಾರ್ಯಕರ್ತರ ಸೆರೆ
Update: 2018-05-19 19:17 IST
ಕಣ್ಣೂರು,ಮೇ 19: ಇಲ್ಲಿಗೆ ಸಮೀಪದ ನ್ಯೂ ಮಾಹೆಯಲ್ಲಿ ಇತ್ತೀಚಿಗೆ ನಡೆದಿದ್ದ ಬಿಜೆಪಿ ಕಾರ್ಯಕರ್ತನ ಕೊಲೆಗೆ ಸಂಬಂಧಿಸಿದಂತೆ ಮೂವರು ಸಿಪಿಎಂ ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ತಡರಾತ್ರಿ ಕೊಝಿಕ್ಕೋಡ್ ಜಿಲ್ಲೆಯ ಲಾಡ್ಜ್‌ವೊಂದರಿಂದ ಬಂಧಿಸಿದ್ದಾರೆ.
ಮೇ 7ರಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಸೇರಿದ ನೆರೆಯ ಮಾಹೆಯಲ್ಲಿ ಸ್ಥಳೀಯ ಸಿಪಿಎಂ ನಾಯಕ ಬಾಬು ಎಂಬಾತನ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಆರು ಜನರ ತಂಡವೊಂದು ಶಾಮ್ಜಿ(40) ಎಂಬಾತನನ್ನು ಆತನ ರಿಕ್ಷಾದಿಂದ ಹೊರಗೆಳೆದು ಹತ್ಯೆ ಮಾಡಿತ್ತು.
ಪ್ರಕರಣದಲ್ಲಿ ಒಟ್ಟು ಎಂಟು ಆರೋಪಿಗಳಿದ್ದು,ಇತರ ಐವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಬಾಬು ಹತ್ಯೆ ಪ್ರಕರಣದಲ್ಲಿ ಮೂವರನ್ನು ಕಳೆದ ವಾರ ಬಂಧಿಸಿದ್ದ ಪುದುಚೇರಿ ಪೊಲೀಸರು,ಪೂರ್ವ ದ್ವೇಷ ಕೊಲೆಗೆ ಕಾರಣವಾಗಿತ್ತು ಎಂದು ತಿಳಿಸಿದ್ದರು.