×
Ad

ಮಂಗಳೂರು: ಹೆಡ್‌ಕಾನ್‌ಸ್ಟೇಬಲ್ ನಾಪತ್ತೆ

Update: 2018-05-19 19:51 IST

ಮಂಗಳೂರು, ಮೇ 19: ಮಂಗಳೂರು ನಗರ ಸಿಎಆರ್ ಘಟಕದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಮೋಹನ್ ಕುಮಾರ್ ಮೇ 5 ರಿಂದ ಕಾಣೆಯಾಗಿದ್ದಾರೆ.

ಅಂದು ಬೆಳಗ್ಗೆ 6 ಗಂಟೆಗೆ ಮಂಜೇಶ್ವರದಲ್ಲಿರುವ ತನ್ನ ಮನೆಯಿಂದ ಹೊರಟವರು ಕರ್ತವ್ಯಕ್ಕೆ ಹಾಜರಾಗದೆ ಮರಳಿ ಮನೆಗೂ ತೆರಳದೆ ಕಾಣೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

35 ವರ್ಷದ ಮೋಹನ್ ಕುಮಾರ್ 5.8 ಅಡಿ ಎತ್ತರವಿದ್ದು, ತುಳು ಮತ್ತು ಕನ್ನಡ ಹಾಗೂ ಮಲಯಾಳಂ ಭಾಷೆಯನ್ನು ಮಾತನಾಡುತ್ತಾರೆ. ಇವರನ್ನು ಕಂಡವರು ಪಾಂಡೇಶ್ವರ (0824-2220518) ಪೊಲೀಸರಿಗೆ ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News