ಪ್ರೊ.ಮುರಲೀಧರ ಬಾಯರಿಗೆ ಡಾಕ್ಟರೇಟ್
Update: 2018-05-19 21:39 IST
ಉಡುಪಿ, ಮೇ 19: ಮಣಿಪಾಲದ ಪ್ರೊ.ಜಿ.ಮುರಲೀಧರ ಬಾಯರಿ ಅವರು ಮಂಡಿಸಿದ ‘ಅಪ್ಲಿಕೇಶನ್ ಆಫ್ ಥಿಯರಿ ಆಫ್ ನೊನ್ ಲೀನಿಯರ್ ಡೈನಮಿಕ್ಸ್ ಟು ಸ್ಟಡಿ ವೇರಿಯಸ್ ಮೆಂಟಲ್ ಸ್ಟೇಟ್ಸ್ ಯೂಸಿಂಗ್ ಇ.ಇ.ಜಿ. ಸಿಗ್ನಲ್ಸ್’ (Application Of Theory Of Nonlinear Dynamics To Study Various Mental States Using EEG Signals) ಪ್ರಬಂಧಕ್ಕೆ ಮಾಹೆ ವಿವಿ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಸಿಂಗಾಪೂರ್‌ನ ಎಸ್‌ಐಎಂ ವಿವಿಯ ಪ್ರಾಧ್ಯಾಪಕ ಡಾ.ಯು.ರಾಜೇಂದ್ರ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಹಾಗೂ ಮಣಿಪಾಲ ಡಾಟ್ ನೆಟ್ ನಿರ್ದೇಶಕ ಡಾ.ಯು.ಸಿ.ನಿರಂಜನ್ ಇವರ ಸಹಮಾರ್ಗದರ್ಶನದಲ್ಲಿ ಈ ಸಂಶೋಧಾ ಪ್ರಬಂಧವನ್ನು ಮಂಡಿಸಲಾಗಿತ್ತು. ಡಾ.ಜಿ.ಮುರಲೀಧರ ಬಾಯರಿ ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ(ಎಂಐಟಿ)ದ ಬಯೋಮೆಡಿಕಲ್ ವಿಭಾಗದ ಮುಖ್ಯಸ್ಥ ರಾಗಿ ಕಾರ್ಯನಿರ್ವಹಿಸುತಿದ್ದಾರೆ.