ಮೂಡುಬೆಳ್ಳೆ: ಶತಾಯುಗೆ ಸನ್ಮಾನ
Update: 2018-05-19 21:41 IST
ಉಡುಪಿ, ಮೇ 19: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಸದಸ್ಯೆ ಶಿಕ್ಷಕ ದಿ.ಜೋಸೆಫ್ ಡಿಸೋಜರ ಪತ್ನಿ ಶತಾಯು ಜೋಸೆಫಿನ್ ಡಿಸೋಜರನ್ನು ಸಂಘದ ವತಿಯಿಂದ ಈಚೆಗೆ ಸನ್ಮಾನಿಸಲಾಯಿತು.
ಕಾಪು ತಾಲೂಕು ಮೂಡುಬೆಳ್ಳೆಯ ಅವರ ಸ್ವಗೃಹದಲ್ಲಿ ‘ಗ್ಲೋರಿ ಮನೆ’ಯಲ್ಲಿ ಅವರ ಮಕ್ಕಳು, ಸೊಸೆಯಂದಿರು ಏರ್ಪಡಿಸಿದ್ದ 100ನೇ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿ ಸಂಘದ ಉಪಾಧ್ಯಕ್ಷೆ 86 ವರ್ಷ ಪ್ರಾಯದ ಎಚ್. ಕೃಷ್ಣಾಬಾಯಿ ಜೋಸೆಫಿನ್ ಡಿಸೋಜರನ್ನು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಎಂ.ನಾರಾಯಣ ಭಟ್, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸನ್ಮಾನಿತರ ಪುತ್ರರಾದ ಮಥಾಯಿಸ್ ಡಿಸೋಜ, ಗಿಲ್ಬರ್ ಡಿಸೋಜ, ಕುಟುಂಬ ಸದಸ್ಯರು, ನಿಕಟ ಸಂಬಂಧಿಗಳು, ನಾಡಿನ ನಾನಾ ಭಾಗದಿಂದ ಬಂದ ಬಂಧುಗಳು ಉಪಸ್ಥಿತರಿದ್ದರು.