ವಲಸಿಗರು ‘ಪ್ರಾಣಿಗಳು’ ಎಂಬ ಹೇಳಿಕೆ ಸಮರ್ಥಿಸಿದ ಟ್ರಂಪ್

Update: 2018-05-19 16:39 GMT

ವಾಶಿಂಗ್ಟನ್, ಮೇ 19: ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸುವ ಕೆಲವು ವಲಸಿಗರನ್ನು ಬಣ್ಣಿಸಲು ತಾನು ಬಳಸಿದ ‘ಪ್ರಾಣಿಗಳು’ ಪದವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ನಾಯಕರ ತೀವ್ರ ಟೀಕೆಯ ಹೊರತಾಗಿಯೂ, ಹಿಂಸಾನಿರತ ಅಪರಾಧ ಗ್ಯಾಂಗ್‌ಗಳ ಸದಸ್ಯರನ್ನು ವಿವರಿಸಲು ಮುಂದೆಯೂ ತಾನು ಈ ಪದವನ್ನು ಬಳಸುವುದಾಗಿ ಅವರು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ತಾನು ನೀಡಿದ ಹೇಳಿಕೆಯು ‘ಎಂಎಸ್-13 ಗ್ಯಾಂಗ್’ ಸದಸ್ಯರನ್ನು ಉದ್ದೇಶಿಸಿತ್ತು ಎಂದು ನ್ಯಾಟೊ ಮಹಾಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್‌ಬರ್ಗ್‌ರೊಂದಿಗೆ ನಡೆದ ಸಭೆಯ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್ ಹೇಳಿದರು.

ಮುಖ್ಯವಾಗಿ ಸಾಲ್ವಡಾರ್, ಹಾಂಡುರಸ್ ಮತ್ತು ಗ್ವಾಟೆಮಾಲಾ ದೇಶಗಳ ಜನರು ಅಮೆರಿಕದಲ್ಲಿ ಸ್ಥಾಪಿಸಿರುವ ಸಂಘಟಿತ ಅಪರಾಧ ಗುಂಪನ್ನು ‘ಎಂಎಸ್-13 ಗ್ಯಾಂಗ್’ ಎಂದು ಕರೆಯಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News