ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಸೊತ್ತು ಕಳವು

Update: 2018-05-19 17:04 GMT

ಕುಂದಾಪುರ, ಮೇ 19: ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ರುವ ಮನೆಯೊಂದಕ್ಕೆ ಮೇ 18ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಕುಂಭಾಶಿಯ ಕೆ.ಶಾಂತಾರಾಮ ಪ್ರಭು ಎಂಬವರ ಅಭಯ ಎಂಬ ಮನೆಯ ಎದುರಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಮನೆಯ ಕಪಾಟು ಒಡೆದು ಅದರಲ್ಲಿದ್ದ ಎರಡು ಚಿನ್ನದ ಕರಿಮಣಿ ಸರ, ನಾಲ್ಕು ಚಿನ್ನದ ಉಂಗುರ, ಚಿನ್ನದ ನಾಣ್ಯ, ವಾಚ್, ಎರಡು ಬೆಳ್ಳಿಯ ಗಟ್ಟಿ, 2700 ಯುಎಸ್‌ಎ ಡಾಲರ್, 15,000 ರೂ. ನಗದು, ಕಂಪ್ಯೂಟರ್ ಮೊಡೆಮ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಇವುಗಳ ಒಟ್ಟು ಮೌಲ್ಯ 7.09 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News