ಇರಾಕ್: ಮುಕ್ತಾದ ನೇತೃತ್ವದ ಪಕ್ಷಕ್ಕೆ ಜಯ

Update: 2018-05-19 17:16 GMT

ಬಗ್ದಾದ್, ಮೇ 19: ಜನಪ್ರಿಯ ಧರ್ಮಗುರು ಮುಕ್ತಾದ ಅಲ್-ಸದರ್ ನೇತೃತ್ವದ ರಾಜಕೀಯ ಪಕ್ಷವು ಇರಾಕ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ವಿಜಯಿಯಾಗಿದೆ ಎಂದು ಚುನಾವಣಾ ಆಯೋಗ ಶನಿವಾರ ಹೇಳಿದೆ.

ಚುನಾವಣೆಯಲ್ಲಿ ಸ್ಪರ್ಧಿಸದಿರುವ ಹಿನ್ನೆಲೆಯಲ್ಲಿ ಸ್ವತಃ ಸದರ್ ಪ್ರಧಾನಿಯಾಗಲು ಸಾಧ್ಯವಿಲ್ಲ. ಆದರೆ, ದೇಶದ ವ್ಯವಹಾರದಲ್ಲಿ ಅವರ ಪ್ರಭಾವ ಗಣನೀಯವಾಗಿ ಹೆಚ್ಚುತ್ತದೆ.

ಅವರ ಪಕ್ಷವು 54 ಸ್ಥಾನಗಳನ್ನು ಗಳಿಸಿದೆ. ಇರಾನ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವ ಅಲ್-ಫತಾ ಪಕ್ಷವು 47 ಸ್ಥಾನಗಳನ್ನು ಪಡೆದಿದೆ. ಹಾಲಿ ಪ್ರಧಾನಿ ಹೈದರ್ ಅಲ್-ಅಬಾದಿ ನೇತೃತ್ವದ ಮೈತ್ರಿಕೂಟವು 42 ಸ್ಥಾನಗಳೊಂದಿಗೆ ಮೂರನೆ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News