ಮಂಗಳೂರು: ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

Update: 2018-05-20 09:04 GMT

ಮಂಗಳೂರು, ಮೇ 20: ಫಸ್ಟ್ ನ್ಯೂರೋ ಆಸ್ಪತ್ರೆ, ಪಡೀಲ್, ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ಇವರ   ಸಹಯೋಗದೊಂದಿಗೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.

ರಕ್ತದಾನ ಶಿಬಿರ ಉದ್ಘಾಟಿಸಿ, ಮಾತಾಡಿದ  ಪಡೀಲ್, ಕಣ್ಣೂರು ವಾರ್ಡಿನ  ಕಾರ್ಪೊರೇಟರ್ ಶ್ರೀ.ಸುಧೀರ್ ಶೆಟ್ಟಿ, ಜನತೆ ಏನನ್ನಾದರೂ  ದಾನ ಮಾಡುವುದಿದ್ದರೆ , ಪ್ರಥಮವಾಗಿ ರಕ್ತದಾನ ಮಾಡಿ, ರಕ್ತದಾನ ಇನ್ನೊಬ್ಬರ ಜೀವ ಉಳಿಸಲು ಸಹಕಾರಿಯಾಗುತ್ತದೆ, ಯುವ ಜನತೆ ಈ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು, ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ರೀತಿಯ ಉತ್ತಮ  ಸಮಾಜಮುಖಿ ಕಾರ್ಯಕ್ರಮ ನಡೆದುದು ಇದು ಪ್ರಥಮ ಹಾಗು ಈ ಕಾರ್ಯಕ್ರಮ ಇತರ ಸಂಸ್ಥೆಗಳಿಗೆ ಮಾದರಿ ಎಂದು ತಿಳಿಸಿದರು. ತಾವೇ ಸ್ವತಃ ರಕ್ತದಾನ ಮಾಡುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯ ನರರೋಗ ತಜ್ಞ ಡಾ.ರಾಜೇಶ್ ಶೆಟ್ಟಿ, ಫಾದರ್ ಮುಲ್ಲರ್ ಆಸ್ಪತ್ರೆಯ ಡಾ.ತಬೀತಾ, ರೋಶನಿ ಶೆಟ್ಟಿ, ನರ್ಸಿಂಗ್ ವಿಭಾಗದ  ಮುಖ್ಯಸ್ಥೆ ಸಿಂಥ್ಯ, ಬ್ಲಡ್ ಡೋನರ್ಸ್ ಮಂಗಳೂರು ಇದರ ಸಂಘಟಕರಾದ ಸಿದ್ದಿಕ್  ಹಾಗು  ಆಸ್ಪತ್ರೆಯ ಆಡಳಿತಾಧಿಕಾರಿ ಪೃಥ್ವಿ ರಾವ್ ರವರು ಉಪಸ್ಥಿತರಿದ್ದರು.

ರಕ್ತದಾನ ಶಿಬಿರದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡುವ ಮುಖಾಂತರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News