2013ರಿಂದ ಅತ್ಯಧಿಕ ಮಟ್ಟಕ್ಕೆ ಪೆಟ್ರೋಲ್‌ ಬೆಲೆ: ಡೀಸೆಲ್‌ ಲೀ.ಗೆ 67.57 ರೂ.

Update: 2018-05-20 15:11 GMT

ಹೊಸದಿಲ್ಲಿ, ಮೇ 20: ಸಾರ್ವಜನಿಕ ರಂಗದ ತೈಲ ಕಂಪೆನಿಗಳು ಕಳೆದ ನಾಲ್ಕು ವಾರಗಳಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ಅಂತಾರಾಷ್ಟ್ರೀಯ ತೈಲ ಬೆಲೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಪ್ರಯತ್ನವಾಗಿ ರವಿವಾರ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 76.24 ದಾಖಲೆ ಏರಿಕೆ ಆಗಿದೆ ಹಾಗೂ ಡೀಸೆಲ್ ಬೆಲೆ ಎಂದಿಗಿಂತಲೂ ಅತ್ಯಧಿಕ ಲೀಟರ್‌ಗೆ ರೂ. 67.57 ಏರಿಕೆಯಾಗಿದೆ.

ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ ಅತ್ಯಧಿಕ 33 ಪೈಸೆ ಏರಿಕೆಯಾಗಿದೆ. 2017 ಜೂನ್ ಮಧ್ಯಭಾಗದಲ್ಲಿ ದಿನಂಪ್ರತಿ ಬೆಲೆ ಪರಿಷ್ಕರಣೆ ಜಾರಿಗೆ ಬಂದ ಬಳಿಕ ಇದು ಅತ್ಯಧಿಕ ಏರಿಕೆ. ಡೀಸೆಲ್ ಬೆಲೆ 26 ಪೈಸೆ ಏರಿಕೆಯಾಗಿದೆ ಎಂದು ರಾಜ್ಯ ಸ್ವಾಮಿತ್ವದ ತೈಲ ಕಂಪೆನಿಗಳ ಅಧಿಸೂಚನೆ ತಿಳಿಸಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ಗೆ ಅನುಗುಣವಾಗಿ ಬೆಲೆ ವಿವಿಧ ರಾಜ್ಯಗಳಲ್ಲಿ ವ್ಯತ್ಯಾಸವಾಗಲಿದೆ. ಮಹಾನಗರಗಳು ಹಾಗೂ ಹೆಚ್ಚಿನ ರಾಜ್ಯ ರಾಜಧಾನಿಗೆ ಹೋಲಿಸಿದರೆ ದಿಲ್ಲಿಯಲ್ಲಿ ಪೆಟ್ರೋಲ್, ಡೀಸೆಲ್ ಅತೀ ಅಗ್ಗ. ಈ ಬಾರಿಯ ಏರಿಕೆಯೊಂದಿಗೆ ಪೆಟ್ರೋಲ್ ಬೆಲೆ ಸಾರ್ವಕಾಲಿಕೆ ಏರಿಕೆಯಾಗಿದೆ. ಇದು 2013 ಸೆಪ್ಟಂಬರ್ 14ರಂದು ದಿಲ್ಲಿಯಲ್ಲಿ ಈ ಹಿಂದಿನ ಅತ್ಯಧಿಕ ಏರಿಕೆ ರೂ. 76.06ನ್ನೂ ಮೀರಿದೆ.

ಡೀಸೆಲ್ ದರ ಕೂಡ ಸಾರ್ವಕಾಲಿಕ ಏರಿಕೆಯಾಗಿದೆ. ಕರ್ನಾಟಕ ವಿಧಾನ ಸಭೆ ಚುನಾವಣೆ ಬಳಿಕ ಮೇ 14ರಂದು ದಿನಂಪ್ರತಿ ಬೆಲೆ ಪರಿಷ್ಕರಣೆ ಆರಂಭಿಸಿದ ಸಾರ್ವಜನಿಕ ರಂಗದ ತೈಲ ಕಂಪೆನಿಗಳು ಇಂದು ಏಳನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸಿವೆ. ಕಳೆದ ಒಂದು ವಾರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 1.61 ಹಾಗೂ ಡೀಸೆಲ್‌ಗೆ ಲೀಟರ್‌ಗೆ ರೂ. 1.64 ಏರಿಕೆಯಾಗಿದೆ.

ದೇಶದಲ್ಲೇ ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕ. ಇಲ್ಲಿ ಸ್ಥಳೀಯ ತೆರಿಗೆ ಹೆಚ್ಚಾಗಿರುವುದರಿಂದ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 80.07. ಪಂಜಿಮ್‌ನಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ದೊರೆಯುತ್ತದೆ. ಇಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ರೂ. 70.26. ದೇಶದಲ್ಲೇ ಹೈದಾರಾಬಾದ್‌ನಲ್ಲಿ ಡೀಸೆಲ್ ಬೆಲೆ ಅತ್ಯಧಿಕ. ಇಲ್ಲಿ ಸ್ಥಳೀಯ ತೆರಿಗೆ ಅತ್ಯಧಿಕವಾಗಿರುವುದರಿಂದ ಡೀಸೆಲ್ ಬೆಲೆ ರೂ. 73.45. ಪೋರ್ಟ್‌ಬ್ಲೇರ್‌ನಲ್ಲಿ ಡೀಸೆಲ್ ಬೆಲೆ ಅತೀ ಕಡಿಮೆ. ಇಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ರೂ. 63.35. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News