ಉಡುಪಿ: ಭಗವದ್ಗೀತಾ ಕೃತಿ ಭಾಗ-6 ಲೋಕಾರ್ಪಣೆ

Update: 2018-05-20 15:51 GMT

ಉಡುಪಿ, ಮೇ 20: ಬನ್ನಂಜೆ ಗೋವಿಂದಾಚಾರ್ಯರ ಸಹಸ್ರಚಂದ್ರ ದರ್ಶನ ಸಂಭ್ರಮದ ಅಂಗವಾಗಿ ಭಗವದ್ಗೀತಾ ಕೃತಿ ಭಾಗ-6 ಲೋಕಾರ್ಪಣೆ ಕಾರ್ಯಕ್ರಮವು ರವಿವಾರ ಅಂಬಲಪಾಡಿ ಮಹಾಕಾಳಿ ಜನಾರ್ದನ ದೇವ ಸ್ಥಾನದ ಬಯಲುರಂಗ ಮಂದಿರದಲ್ಲಿ ಜರಗಿತು.

ಆಚಾರ್ಯತ್ರಯರ ಭಾಷ್ಯ ಹಾಗೂ ಬನ್ನಂಜೆಯವರ ವಿಶ್ಲೇಷಣೆಯೊಂದಿಗೆ ಈಶಾವಾಸ್ಯ ಪ್ರತಿಷ್ಠಾನ ಪ್ರಕಾಶಿಸಿರುವ ಶ್ರೀಮದ್ಭಗದ್ಗೀತಾ ಭಾಗ-6 ಕೃತಿಯನ್ನು ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಲೋಕಾರ್ಪಣೆ ಗೊಳಿಸಿದರು.

ಈ ಸಂದರ್ಭದಲ್ಲಿ ಸನ್ಮಾನ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜಕೀಯ ಉದ್ದೇಶಗಳಿಗಾಗಿ ಹಿಂದೂ ಧರ್ಮವನ್ನು ವಿಂಗಡಿಸುವ ಪ್ರಯತ್ನ ಗಳಾಗುತ್ತಿದ್ದು, ವೈಚಾರಿಕ ಮನೋಭಾವದಿಂದ ಇದನ್ನು ಹಿಮ್ಮೆಟ್ಟಿ ಸಲು ಬನ್ನಂಜೆ ಯವರಂತ ವಿದ್ವಾಂಸರಿಂದ ಮಾತ್ರ ಸಾಧ್ಯ. ಈ ಕೃತಿ ಹಿಂದೂ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯಾಗಿದೆ ಎಂದು ಹೇಳಿದರು. ಡಾ. ಬನ್ನಂಜೆ ಗೋವಿಂದಾಚಾರ್ಯ ಮಾತನಾಡಿ, ಗೀತೆ ಬಗ್ಗೆ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತದ ಭಾಷ್ಯಗಳು ಒಂದೆಡೆ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿರುವುದು ಕನ್ನಡದಲ್ಲೇ ಪ್ರಥಮ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್, ಚಿತ್ರನಟ ಶಿವರಾಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News