ಲಾರಿ ಢಿಕ್ಕಿ: ಗಾಯಾಳು ಬೈಕ್ ಸವಾರ ಮೃತ್ಯು
Update: 2018-05-20 21:49 IST
ಮಂಗಳೂರು, ಮೇ 20: ಲಾರಿಯೊಂದು ಢಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಮೃತರನ್ನು ಮುಡಿಪು ಕುರ್ನಾಡು ನಿವಾಸಿ, ಎಂಆರ್‌ಪಿಎಲ್ ಉದ್ಯೋಗಿ ಮಹೇಶ್ ಭಟ್ (35) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ 8:45ಕ್ಕೆ ಮುಡಿಪು ತನ್ನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಎಂಆರ್‌ಪಿಎಲ್ ಕಡೆಗೆ ಬರುತ್ತಿದ್ದರು. ಕೊಟ್ಟಾರ ಚೌಕಿ ತಲುಪುತ್ತಿದ್ದಂತೆ ಹಿಂದಿನಿಂದ ಬರುತ್ತಿದ್ದ ಲಾರಿ ಮಹೇಶ್ ಚಲಾಯಿಸುತ್ತಿದ್ದ ದಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಮಹೇಶ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಶನಿವಾರ ಮೃತಪಟ್ಟಿದ್ದಾರೆ.
ಮಂಗಳೂರು ಸಂಚಾರಿ ಪಶ್ಚಿಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.