×
Ad

ದ್ವಿಚಕ್ರ ವಾಹನ ಕಳವು: ದೂರು ದಾಖಲು

Update: 2018-05-20 22:06 IST

ಮಂಗಳೂರು, ಮೇ 20: ಹೊಸ ರೋಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನ ಅಪಹರಿಸಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಫಿರೋಝ್ ಅಹ್ಮದ್ ಎಂಬವರಿಗೆ ಸೇರಿದ ರೋಯಲ್ ಎನ್‌ಫೀಲ್ಡ್ ನಂಬರ್ ಆಗದ ಹೊಸ ಬುಲೇಟ್ ದ್ವಿಚಕ್ರ ವಾಹನ ಮೇ 16ರಂದು ರಾತ್ರಿ 11 ಗಂಟೆಗೆ ಫಳ್ನೀರ್ ರಸ್ತೆಯ ಐಲ್ಯಾಂಡ್ ಆಸ್ಪತ್ರೆ ಬಳಿಯ ಅಪಾರ್ಟ್‌ಮೆಂಟ್‌ವೊಂದರ ಎದುರು ನಿಲ್ಲಿಸಿದ್ದ ಬೈಕ್‌ನ್ನು ಮೇ 17ರ ಬೆಳಗ್ಗಿನ ಜಾವ 6 ಗಂಟೆಯ ಮಧ್ಯೆ ಕಳವು ಮಾಡಲಾಗಿದೆ ಎಂದು ದೂರು ನೀಡಲಾಗಿದೆ.

ಕಳವು ಮಾಡಿರುವ ವಾಹನದ ಮೌಲ್ಯ 1,75,000 ರೂ. ಎಂದ ಅಂದಾಜಿಸಲಾಗಿದೆ. ಅದು 2018ನೆ ಮಾಡೆಲ್ ಆಗಿದ್ದು, ಮೇಟಾಲಿಕ್ ಕಪ್ಪು ಬಣ್ಣದ್ದಾಗಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News