ಬೆಂಕಿ ಅಕಸ್ಮಿಕ: ಮಹಿಳೆ ಮೃತ್ಯು
Update: 2018-05-20 22:14 IST
ಕುಂದಾಪುರ, ಮೇ 20: ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೀಜಾಡಿ ಗ್ರಾಮದ ದೊಡ್ಮನೆಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ದೊಡ್ಮನೆಬೆಟ್ಟು ನಿವಾಸಿ ಕಮಲಮ್ಮ(85) ಎಂದು ಗುರುತಿಸ ಲಾಗಿದೆ. ಇವರು ಮೇ 13ರಂದು ಸಂಜೆ 7ಗಂಟೆಗೆ ದೇವರ ಕೋಣೆಯಲ್ಲಿ ದೀಪ ಹಚ್ಚುವಾಗ ಕೆಳಗೆ ಹಚ್ಚಿ ಇಟ್ಟಿದ್ದ ದೀಪದ ಬೆಂಕಿಗೆ ಅವರು ಧರಿಸಿದ್ದ ಸೀರೆ ತಗುಲಿ ಬೆಂಕಿ ಹತ್ತಿಕೊಂಡಿತು. ಇದರಿಂದ ಗಂಭೀರವಾಗಿ ಸುಟ್ಟ ಗಾಯ ಗೊಂಡ ಅವರು ಮೇ 19ರಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.