×
Ad

ಉಳ್ಳಾಲ : ರಮಝಾನ್ ಕಿಟ್ ವಿತರಣೆ

Update: 2018-05-21 19:41 IST

ಉಳ್ಳಾಲ,ಮೇ 21: ಇಸ್ಲಾಂ ಸಮಾನತೆಯನ್ನು ಸಾರುತ್ತದೆ ಸಮುದಾಯದಲ್ಲಿ ಕಡು ಬಡವರಿದ್ದರೂ ಅವರನ್ನು ಗುರುತಿಸಿ ಜಮೀಯ್ಯತ್ತುಲ್ ಫಲಾಹ್ ಮಂಗಳೂರು ರಮಝಾನ್ ತಿಂಗಳಿನಲ್ಲಿ ಅವಶ್ಯವಿರುವ ಸಾಮಾಗ್ರಿಗಳನ್ನು ವಿತರಿಸುತ್ತಿದೆ ಎಂದು ಮಂಗಳೂರು ತಾಲೂಕು ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅಭಿಪ್ರಾಯಪಟ್ಟರು. 

ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ವತಿಯಿಂದ 100 ಕಡು ಬಡ ಕುಟುಂಬವನ್ನು ಗುರುತಿಸಿ ಅವರಿಗೆ ರಮಝಾನ್ ವೃತಾಚರಣೆ ಸಂದರ್ಭದಲ್ಲಿ ಅವಶ್ಯ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು. 

ಸಮಾಜದಲ್ಲಿ ಯಾರು ಹಸಿವೆಯಿಂದ ಇರಬಾರದು ಎಲ್ಲರನ್ನು ಸಮಾನತೆಯಿಂದ ಕಾಣಬೇಕು ಎಂಬ ನಿಯಮದಂತೆ ಈ ಕಾರ್ಯವನ್ನು ಪ್ರತೀ ವರ್ಷ ಮಾಡುತ್ತಿದ್ದು ಈ ಬಾರಿಯು ರಮಝಾನ್ ಕಿಟ್ ವಿತರಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಂ.ಹೆಚ್. ಮಲಾರ್, ಕೋಶಾಧಿಕಾರಿ ಕೆ.ಎಂ.ಕೆ. ಮಂಜನಾಡಿ, ಹಾಗೂ ತಾಲೂಕು ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News