ಪಿಕ್‌ಅಪ್- ಬೈಕ್ ಢಿಕ್ಕಿ: ಮಹಿಳೆ ಮೃತ್ಯು
Update: 2018-05-21 23:24 IST
ಗಂಗೊಳ್ಳಿ, ಮೇ 21: ಪಿಕ್‌ಅಪ್ ವಾಹನವೊಂದು ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಆಲೂರು ಪೇಟೆಯ ಸೂರ್ಯೋದಯ ಜನರಲ್ ಸ್ಟೋರ್ ಬಳಿ ಮೇ 20ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಕಮಲಾಕ್ಷ ಶೇಟ್ ಎಂಬವರ ಪತ್ನಿ ರೇಶ್ಮಾ ಶೇಟ್ ಎಂದು ಗುರು ತಿಸಲಾಗಿದೆ. ಕಮಲಾಕ್ಷ ಶೇಟ್ ತನ್ನ ಬೈಕಿನಲ್ಲಿ ಪತ್ನಿ ಹಾಗೂ ಮಗನ ಜೊತೆ ಚಿತ್ತೂರು ಕಡೆಯಿಂದ ಮುಳ್ಳಕಟ್ಟೆ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಪಿಕ್‌ಅಪ್ ವಾಹನ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ರೇಶ್ಮಾ ಶೇಟ್ ಕುಂದಾಪುರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿರುವ ಕಮಲಾಕ್ಷ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.