×
Ad

ನಿಪ್ಹಾ ವೈರಸ್ : ವಿಶೇಷ ಪ್ರಾರ್ಥನೆಗೆ ಖಾಝಿ ಕೂರತ್ ತಂಙಳ್ ಕರೆ

Update: 2018-05-22 20:51 IST

ಮಂಗಳೂರು, ಮೇ 22: ನೆರೆಯ ಕೇರಳದಲ್ಲಿ ನಿಪ್ಹಾ ಎಂಬ ಮಾರಕ ರೋಗವು ಜನರನ್ನು ಆತಂಕಕ್ಕೀಡು ಮಾಡಿದ್ದು, ಇದೀಗ ಮಂಗಳೂರಿಗೂ ಕಾಲಿಟ್ಟಿರುವ ಸುದ್ದಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಆರೋಗ್ಯ ಇಲಾಖೆಯು ಸೂಚಿಸುವ ಮುಂಜಾಗರೂಕತಾ ಕ್ರಮವನ್ನು ಪಾಲಿಸುವುದರೊಂದಿಗೆ, ಎಲ್ಲಾ ಮಸೀದಿಗಳಲ್ಲಿ ತರಾವೀಹ್ ನಮಾಝ್ ನ ಬಳಿಕ ವಿಶೇಷ ಪ್ರಾರ್ಥನೆ ನಡೆಸುವಂತೆ ದ.ಕ. ಸಂಯುಕ್ತ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕರೆ ನೀಡಿದ್ದಾರೆ.

ಯುವಜನತೆಯು ಅತಿರೇಕದ ವರ್ತನೆಗಳಿಂದ ದೂರ ಇದ್ದು, ನೈತಿಕ ಚೌಕಟ್ಟಿನೊಳಗೆ ಜೀವನ ರೂಪಿಸಲು ಮುಂದಾಗಬೇಕು. ಆ ಮೂಲಕ ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈ ಜೋಡಿಸಬೇಕೆಂದು ಅವರು ಕರೆ ನೀಡಿರುವುದಾಗಿ ಅಶ್ರಫ್ ಕಿನಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News