ನಮಾಝ್(ಶಾಫಿ,ಹನಫಿ ಮದ್ಸ್ ಹಬ್ ನಲ್ಲಿ) ಕೃತಿ ಬಿಡುಗಡೆ
Update: 2018-05-22 20:58 IST
ಕಳಸ, ಮೇ 22: ಹಿರಿಯ ಲೇಖಕ ಎಂ.ಪಿ.ಹಸನ್ ಮುಅಲ್ಲಿಮ್ ಬಾಳೆಹೊಳೆ ಅವರು ಬರೆದ ಮಂಗಳೂರಿನ ಪಿರ್ಸಾ ಪಬ್ಲಿಕೇಷನ್ ಹೊರತಂದ ನಮಾಝ್ (ಶಾಫಿ,ಹನಫಿ ಮದ್ಸ್ ಹಬ್ ನಲ್ಲಿ) ಎಂಬ ಕೃತಿಯು ಬಿಡುಗಡೆ ಗೊಂಡಿತು.
ಸೈಯದ್ ಹಬೀಬ್ ತಂಙಳ್ ಅವರು ಕಳಸ ಜುಮಾ ಮಸೀದಿ ಖತೀಬ್ ಉಬೈದುಲ್ಲಾ ಝುಹ್ರಿ ಅವರಿಗೆ ಪ್ರತಿಯನ್ನು ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಕಳಸ ಮಸೀದಿ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಉದಯಚಂದ್ರ ಇಬ್ರಾಹೀಂ ಕಳಸ,ಲೇಖಕ ಎಂ.ಪಿ.ಹಸನ್ ಮುಅಲ್ಲಿಮ್ ಬಾಳೆಹೊಳೆ ಮತ್ತಿತರರು ಉಪಸ್ಥಿತರಿದ್ದರು.