ಬೈಕ್ ಕಳವು: ದೂರು
Update: 2018-05-22 21:00 IST
ಮಂಗಳೂರು, ಮೇ 22: ನಗರದ ಮಾಲ್‌ವೊಂದರ ಬಳಿ ರಸ್ತೆ ಬದಿ ಪಾರ್ಕ್ ಮಾಡಿದ ಬುಲೆಟ್ ಬೈಕೊಂದನ್ನು ಕಳವು ಮಾಡಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ. 26ರಂದು ಸಂಜೆ 6.30ರ ವೇಳೆಗೆ ಪಾಂಡೇಶ್ವರ ಬಳಿಯಿರುವ ಫಿಝಾ ಮಾಲ್ ಬಳಿ ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿ ಹ್ಯಾಂಡ್‌ಲಾಕ್ ಹಾಕಿ ಮಾಲ್ ಗೆ ಹೋಗಿದ್ದರು. ರಾತ್ರಿ 9ಗಂಟೆಗೆ ಮರಳಿ ಬಂದು ನೋಡುವಾಗ ಬೈಕ್ ಕಳವಾಗಿತ್ತು. ಬೈಕ್‌ನ ಮೌಲ್ಯ 49 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.