ಕಾವೂರು : ಮನೆಗೆ ನುಗ್ಗಿ ಕಳವು
Update: 2018-05-22 21:06 IST
ಮಂಗಳೂರು, ಮೇ 22: ನಗರದ ಕಾವೂರು ಟೌನ್‌ಶಿಪ್ ಮನೆಯೊಂದರಲ್ಲಿ ಬೆಡ್ ಮೇಲಿಟ್ಟಿದ್ದ ಸುಮಾರು 80ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಕಾವೂರು ಪೊಲೀಸರಿಗೆ ದೂರು ನೀಡಲಾಗಿದೆ.
ಮೇ 21ರಂದು ರಾತ್ರಿ 12.30ರಿಂದ ಬೆಳಗ್ಗೆ 9ಗಂಟೆಯ ನಡುವೆ ಕಾವೂರು ಕೆಐಒಸಿಎಲ್ ಲಿಮಿಟೆಡ್ ಟೌನ್‌ಶಿಪ್ ಮನೆಯೊಂದರ ಕಿಟಕಿಗೆ ಹಾಕಿದ ಸೊಳ್ಳೆ ಪರದೆಯನ್ನು ತುಂಡು ಮಾಡಿ ಮನೆಯ ಒಳಗಡೆ ಬೆಡ್ ಮೇಲಿಟ್ಟಿದ್ದ 45ಗ್ರಾಂ ತೂಕದ ಮಾಂಗಲ್ಯ ಸರವನ್ನು ಯಾರೋ ಕಳವು ಮಾಡಿದ್ದಾರೆ. ಕಳವಾಗಿರುವ ಸರದ ಮೌಲ್ಯ ಸುಮಾರು 80 ಸಾವಿರ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.