×
Ad

ಎವರೆಸ್ಟ್ ಶಿಖರ ಏರಿದ ಇಬ್ಬರು ಭಾರತೀಯ ಮಹಿಳೆಯರು

Update: 2018-05-22 21:22 IST

ಹೊಸದಿಲ್ಲಿ, ಮೇ 22: ಭಾರತದ ಇಬ್ಬರು ಮಹಿಳೆಯರು ತಮ್ಮ ಪ್ರಶಿಕ್ಷಕರೊಂದಿಗೆ ಎವರೆಸ್ಟ್ ಶಿಖರವನ್ನು ಏರಿದ ಸಾಧನೆ ಮಾಡಿದ್ದಾರೆ ಎಂದು ಈ ಅಭಿಯಾನದ ಪ್ರಾಯೋಜಕತ್ವ ವಹಿಸಿದ್ದ ಟಾಟಾ ಸ್ಟೀಲ್ ಸಂಸ್ಥೆ ತಿಳಿಸಿದೆ.

ಪೂನಂ ರಾಣಾ ಹಾಗೂ ಸ್ವರ್ಣಲತಾ ದಲಾಯ್ ಹಾಗೂ ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಶನ್(ಟಿಎಸ್‌ಎಎಫ್) ನ ಪ್ರಶಿಕ್ಷಕ ಸಂದೀಪ್ ಟೋಲಿಯ ರವಿವಾರ ಎವರೆಸ್ಟ್ ಶಿಖರವನ್ನೇರಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ನಿವಾಸಿಯಾಗಿರುವ 21ರ ಹರೆಯದ ಪೂನಂ ರಾಣಾ ಹಾಗೂ ಒಡಿಶಾ ನಿವಾಸಿಯಾಗಿರುವ 20ರ ಹರೆಯದ ಸ್ವರ್ಣಲತಾ ದಲಾಯಿ ಕಳೆದ ಒಂದು ವರ್ಷದಿಂದ ಟಿಎಸ್‌ಎಎಫ್‌ನಲ್ಲಿ ಪರ್ವತಾರೋಹಣ ತರಬೇತಿ ಪಡೆಯುತ್ತಿದ್ದರು.

  ಈ ಮಹಿಳೆಯರ ಉತ್ಕೃಷ್ಟ ಸಾಧನೆಗೆ ಅವರಲ್ಲಿರುವ ಅದಮ್ಯ ಚೈತನ್ಯ, ಉತ್ಸಾಹ ಮತ್ತು ಸ್ಥೈರ್ಯ ಕಾರಣವಾಗಿದೆ. ಸಂಸ್ಥೆಯ ಬೆಂಬಲದಿಂದ ಇವರ ಕನಸು ನನಸಾಗಿರುವುದು ಹೆಮ್ಮೆಯ ವಿಷಯವಾಗಿದೆ. ದೇಶದಲ್ಲಿ ಸಾಹಸ ಕ್ರೀಡೆಗೆ ನೀಡುತ್ತಿರುವ ಬೆಂಬಲವನ್ನು ಸಂಸ್ಥೆ ಮುಂದುವರಿಸಲಿದೆ ಎಂದು ಟಾಟಾ ಸ್ಟೀಲ್‌ನ ಕಾರ್ಪೊರೇಟ್ ಸೇವಾ ವಿಭಾಗದ ಉಪಾಧ್ಯಕ್ಷ ಸುನಿಲ್ ಭಾಸ್ಕರನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News