ಜಾಮಿಯಾ ಮಿಲ್ಲಿಯಾ ವಿ.ವಿ. ವೆಬ್‌ಸೈಟ್ ಹ್ಯಾಕ್

Update: 2018-05-22 17:06 GMT

ಹೊಸದಿಲ್ಲಿ, ಮೇ 22: ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ. ವೆಬ್‌ಸೈಟ್ ‘ಹ್ಯಾಪಿ ಬರ್ತ್‌ಡೇ ಪೂಜಾ. ಯುವರ್ ಲವ್’ ಎಂಬ ಶುಭಾಶಯ ಪ್ರದರ್ಶಿಸಿದೆ.

ವೆಬ್‌ಸೈಟ್ ಹ್ಯಾಕ್ ಮಾಡಿರುವ ಹೊಣೆಯನ್ನು ಯಾವುದೇ ಗುಂಪು ಹೊತ್ತಿಲ್ಲ. ವೆಬ್‌ಸೈಟ್ ಅನ್ನು ಮಂಗಳವಾರ ಬೆಳಗ್ಗೆ ಮರು ಸ್ಥಾಪಿಸಲಾಯಿತು. ಪ್ರತಿಷ್ಠಿತ ಕೇಂದ್ರ ವಿಶ್ವವಿದ್ಯಾನಿಲಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯವನ್ನು ರಾಜಧಾನಿಯಲ್ಲಿ 1920ರಲ್ಲಿ ಆರಂಭಿಸಲಾಗಿತ್ತು. ಗೃಹ, ರಕ್ಷಣೆ ಹಾಗೂ ಕಾನೂನು ಸಚಿವಾಲಯದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ ವಾರಗಳಲ್ಲಿ ಈ ಸೈಬರ್ ದಾಳಿ ನಡೆದಿದೆ. ಈ ಬೆದರಿಕೆ ಭಾರತದ ಪ್ರತಿದಾಳಿ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡಿದೆ.

ಹ್ಯಾಕರ್‌ಗಳನ್ನು ಖಂಡಿಸಿರುವ ವಿಶ್ವವಿದ್ಯಾನಿಲಯ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವೈಯುಕ್ತಿಕ ಸಂದೇಶಗಳನ್ನು ಕಳುಹಿಸುವ ಮೂಲಕ ಕೆಲವರು ಇಂತಹ ತಮಾಷೆ ಮಾಡುವುದು ದುರಾದೃಷ್ಟಕರ. ಈ ಬಗ್ಗೆ ನಾವು ಸಭೆ ನಡೆಸಿದ್ದೇವೆ ಹಾಗೂ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಿದ್ದೇವೆ ಎಂದು ವಿಶ್ವವಿದ್ಯಾನಿಲಯದ ಮಾದ್ಯಮ ಸಂಯೋಜಕ ಸೈಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News