70 ಶೇ. ಭಾರತೀಯರು ಮಾಂಸಾಹಾರಿಗಳು: ದಕ್ಷಿಣ, ಈಶಾನ್ಯ ಭಾರತದಲ್ಲಿ ಅತೀ ಹೆಚ್ಚು ಮಾಂಸಪ್ರಿಯರು

Update: 2018-05-22 17:08 GMT

ಹೊಸದಿಲ್ಲಿ,  ಮೇ 22: ದೇಶದಲ್ಲಿ ಮಾಂಸಾಹಾರ ಸೇವನೆಯ ಬಗ್ಗೆ ಒಂದು ವರ್ಗವು ಅಪಸ್ವರ ಎತ್ತುತ್ತಿರುವ ನಡುವೆಯೇ ಸಮೀಕ್ಷೆಯೊಂದು 80 ಶೇ. ಭಾರತೀಯ ಪುರುಷರು ಹಾಗು 70 ಶೇ. ಭಾರತೀಯ ಮಹಿಳೆಯರು ಮಾಂಸಾಹಾರಿಗಳು ಎಂದು ವರದಿ ನೀಡಿದೆ. ಸಮೀಕ್ಷೆಯ ಪ್ರಕಾರ 70 ಶೇ. ಭಾರತೀಯರು ಮಾಂಸಾಹಾರಿಗಳಾಗಿದ್ದಾರೆ.

ಸಸ್ಯಾಹಾರದ ವಿಷಯಕ್ಕೆ ಬರುವುದಾದರೆ ಉತ್ತರ ಭಾರತದ ಕೆಲ ಭಾಗಗಳಲ್ಲಿ ಮಾತ್ರ ಸಸ್ಯಾಹಾರಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ . ಆದರೆ ದಕ್ಷಿಣ ಭಾರತ ಹಾಗು ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಹುತೇಕ ಮಂದಿ ಮಾಂಸಾಹಾರಿಗಳೇ ಆಗಿದ್ದಾರೆ. ಈ ರಾಜ್ಯಗಳು ಜನರು ಮಾಂಸ, ಮೀನು ಹಾಗು ಮೊಟ್ಟೆಗಳಂತಹ ಮಾಂಸಾಹಾರಗಳನ್ನು ಅತೀ ಹೆಚ್ಚು ಇಷ್ಟಪಡುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

80 ಶೇ. ಭಾರತದ ಪುರುಷರು ಹಾಗು 70 ಶೇ. ಮಹಿಳೆಯರು ಮಾಂಸಾಹಾರಿಗಳಾಗಿದ್ದಾರೆ ಎಂದು ‘ಇಂಡಿಯಾ ಸ್ಪೆಂಡ್’ ಹಾಗು ‘ಫ್ಯಾಕ್ಟ್ ಚೆಕ್ಕರ್’ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ ಎಫ್ ಎಚ್ ಎಸ್) ತಿಳಿಸಿದೆ. ಆದರೆ ಪ್ರತಿದಿನ ಅವರು ಮಾಂಸಾಹಾರ ಸೇವನೆ ಮಾಡುತ್ತಾರೆ ಎನ್ನುವುದು ಇದರರ್ಥವಲ್ಲ. ತರಕಾರಿ, ಹಾಲು, ಬೇಳೆಕಾಳುಗಳು ಅಥವಾ ಧಾನ್ಯಗಳನ್ನೂ ಇವರು ಸೇವಿಸುತ್ತಾರೆ.

48.9 ಶೇ. ಪುರುಷರು ಹಾಗು 42.8 ಶೇ. ಭಾರತೀಯ ಮಹಿಳೆಯರು ವಾರವೊಂದಕ್ಕೆ ಮಾಂಸಾಹಾರವನ್ನು ಸೇವಿಸುವವರಾಗಿದ್ದಾರೆ. ಕೇರಳದಲ್ಲಿ (92.8 ಶೇ.) ಅಂದರೆ ಅತೀ ಹೆಚ್ಚು ಮಹಿಳೆಯರು ಮಾಂಸಾಹಾರ ಸೇವಿಸುತ್ತಾರೆ. ನಂತರದ ಸ್ಥಾನಗಳಲ್ಲಿ ಗೋವಾ (85.7ಶೇ.) ಹಾಗು ಅಸ್ಸಾಂ (80.4 ಶೇ.) ಇವೆ. ಪುರುಷರ ವಿಭಾಗದಲ್ಲಿ ತ್ರಿಪುರಾ (94.8 ಶೇ.) ಮೊದಲ ಸ್ಥಾನದಲ್ಲಿದ್ದರೆ, ಕೇರಳ (90.1 ಶೇ.) ಹಾಗು ಗೋವಾ (88 ಶೇ.) ನಂತರದ ಸ್ಥಾನಗಳಲ್ಲಿವೆ. ಪಂಜಾಬ್ (10 ಶೇ.), ರಾಜಸ್ಥಾನ (10.2 ಶೇ.) ಹಾಗು ಹರ್ಯಾಣ (13 ಶೇ.)ದಲ್ಲಿ ಅತೀ ಕಡಿಮೆ ಮಾಂಸಾಹಾರಿಗಳಿದ್ದಾರೆ ಎಂದು ಸಮೀಕ್ಷೆ ತಿಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News