×
Ad

ದ.ಕ. ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

Update: 2018-05-23 19:34 IST

ಮಂಗಳೂರು, ಮೇ 23: ಕುಮಾರಸ್ವಾಮಿಯವರು ರಾಜ್ಯದ 25ನೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಿಹಿ ತಿಂಡಿ ವಿತರಿಸಿ ಸಂಭ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಸುಶೀಲ್ ನೊರೊನ್ಹ ಮಾತನಾಡಿ, 11 ವರ್ಷಗಳ ನಂತರ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಜಿಲ್ಲೆಯ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಪಕ್ಷ ಸಂಘಟನೆಗೆ ಬಲ ಬಂದಿದೆ. ಮುಂದಿನ ದಿನಗಳಲ್ಲಿ ಸದನದಲ್ಲಿ ಬಹುಮತ ಸಾಬೀತು ಪಡಿಸಿ ಹೊಸ ಮಂತ್ರಿ ಮಂಡಲದೊಂದಿಗೆ ಈ ರಾಜ್ಯದಲ್ಲಿ ಧಾರ್ಮಿಕ ಸೌಹಾರ್ದ, ಆಡಳಿತ ಯಂತ್ರಕ್ಕೆ ಚುರುಕು ಹಾಗೂ ಆಡಳಿತ ಪಾರದರ್ಷಕತೆ, ಕಟ್ಟುನಿಟ್ಟಿನ ಕಾನೂನು, ಯುವ ಜನಾಂಗಕ್ಕೆ ಶಿಕ್ಷಣ ಉದ್ಯೋಗ, ರೈತರ, ದೀನ ದಲಿತರ ಪರ ಸರಕಾರವಾಗಲಿ ಎಂದು ಹಾರೈಸಿದರು.

20 ವರ್ಷಗಳ ಹಿಂದೆ ಪರಿಪೂರ್ಣ ಆಡಳಿತ ನಡೆಸಿದ ಜನತಾದಳ ಸರಕಾರದ ಅವಧಿಯಲ್ಲಿ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಅಧಿಕಾರ ಅನುಭವಿಸಿದ ಪಕ್ಷದ ನಾಯಕರು ಮಾಜಿ ಸಚಿವ ಅಮರನಾಥ್ ಶೆಟ್ಟಿರವರನ್ನು ಹೊರತುಪಡಿಸಿ ಬೇರೆ ಎಲ್ಲಾ ನಾಯಕರು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋದರು. ಇನ್ನೊಂದೆಡೆ 2006-07ರ ಅವಧಿಯಲ್ಲಿ ಸಮ್ಮಿಶ್ರ ಸರಕಾರ ಆಡಳಿತದಲ್ಲಿ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ದೊರೆಯಲಿಲ್ಲ. ಹೀಗೆ ಕಳೆದ 20 ವರ್ಷಗಳಲ್ಲಿ ಯಾವುದೇ ಆಸೆ ಆಕಾಂಕ್ಷೆ ವಿಲ್ಲದೆ ನಿಷ್ಟಾವಂತ ಪ್ರಮಾಣಿಕ ಕಾರ್ಯಕರ್ತರು ಜಿಲ್ಲೆಯಲ್ಲಿ ಎರಡು ಪ್ರಬಲ ಪಕ್ಷಗಳ ನಡುವೆ ಬಲಹೀನರಾದರೂ ಪಕ್ಷ ಬೆಳೆಸಲು ಪ್ರಾಮಾಣಿಕವಾಗಿ ದುಡಿದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ರಾಮ್ ಗಣೇಶ್, ರಾಮಕೃಷ್ಣ ಶೆಟ್ಟಿ, ಗೋಪಾಲ್ ಕೃಷ್ಣ ಅತ್ತಾವರ, ಲತೀಫ್ ಒಳಚಿಲ್, ಕಾರ್ಪೊರೇಟರ್ ಅಜೀಝ್ ಕುದ್ರೋಳಿ, ಪ್ರಕಾಶ್ ಗೋಮ್ಸ್, ಇಯಾಝ್, ಹಮೀದ್ ಬೆಂಗ್ರೆ, ವಿನ್ಸೆಂಟ್ ಡಿಸೋಜ, ಆರಿಫ್, ಪುಷ್ಪರಾಜ್ ಶೆಟ್ಟಿ, ಗಂಗಾದರ್ ಉಲ್ಲಾಲ್, ಕನಕದಾಸ್, ರಘು, ಕುಲದೀಪ್, ಚುಡಾಮಣಿ, ಕವಿತಾ, ಲೀಲವತಿ, ಭಾರತಿ ಮುಂತಾದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News