ಕುಂತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2018-05-23 14:21 GMT

ಕಡಬ, ಮೇ 23: ಮಹಿಳೆಯೋರ್ವರು ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಅಪರಾಹ್ನ ಕುಂತೂರಿನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಪೆರಾಬೆ ಗ್ರಾಮದ ಕುಂತೂರು ಅನ್ನಡ್ಕ ನಿವಾಸಿ ವಿಶ್ವನಾಥ್ ಗೌಡ ಎಂಬವರ ಪತ್ನಿ ಶಶಿಕಲಾ (46) ಎಂದು ಗುರುತಿಸಲಾಗಿದೆ.

ಅವರು ಬುಧವಾರ ಅಪರಾಹ್ನ ತನ್ನ ಮನೆಯ ಅಂಗಳದಲ್ಲಿದ್ದ ಆವರಣ ಗೋಡೆಯಿಲ್ಲದ ಬಾವಿಯಿಂದ ನೀರು ಸೇದುತ್ತಿದ್ದಾಗ ಇಪ್ಪತ್ರೈದು ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಯನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಿ ಕುಟುಂಸ್ಥರಿಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News