ಮೇ 25: ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪ್ರದಾನ

Update: 2018-05-23 14:28 GMT

ಮಂಗಳೂರು, ಮೇ 23: ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ (ಸ್ವಾಯತ್ತತೆ) 8ನೆ ಪದವಿ ಪ್ರದಾನ ಸಮಾರಂಭವು ಮೇ 25ರಂದು ಮಧ್ಯಾಹ್ನ 3 ಗಂಟೆಗೆ ನಗರದ ಸೈಂಟ್ ಅಲೋಶಿಯಸ್ ಪಿಯು ಕಾಲೇಜು ಕ್ಯಾಂಪಸ್‌ನ ಲೊಯೊಲಾ ಸಭಾಂಗಣದಲ್ಲಿ ನಡೆಯಲಿದೆ.

ಕೋಲ್ಕತ್ತಾ ಸೈಂಟ್ ಕ್ಸೇವಿಯರ್ಸ್‌ ವಿವಿಯ ಪ್ರೊ ವೈಸ್ ಚಾನ್ಸಲರ್ ರೆ.ಡಾ.ಸೆಬಸ್ತಿ ಎಲ್. ರಾಜ್, ಮಂಗಳೂರು ಜೆಸ್ಯುಟ್ ಎಜುಕೇಶನಲ್ ಸೊಸೈಟಿ (ಎಂಜೆಇಎಸ್)ಯ ಅಧ್ಯಕ್ಷ ರೆ.ಡಾ. ಸ್ಟಾನಿಸ್‌ಲಾಸ್ ಡಿಸೋಜಾ, ಎಂಜೆಇಎಸ್‌ನ ಉಪಾಧ್ಯಕ್ಷ ರೆ.ಫಾ. ಡಯನೀಶಿಯಸ್ ವಾಸ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News