ಕರಿಯ ಮಹಿಳೆ ಜಾರ್ಜಿಯಾದ ನೂತನ ಗವರ್ನರ್: ಅಮೆರಿಕಾದ ಇತಿಹಾಸದಲ್ಲೇ ಮೊದಲು

Update: 2018-05-23 15:33 GMT

ಅಟ್ಲಾಂಟ, ಮೇ 23: ಅಮೆರಿಕಾದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರಿಯ ಮಹಿಳೆಯೋರ್ವರು ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅಟ್ಲಾಂಟ ಮೂಲದ ವಕೀಲೆ ಸ್ಟೇಸಿ ಅಬ್ರಹಾಂರನ್ನು ಜಾರ್ಜಿಯಾದ ಡೆಮೊಕ್ರಾಟಿಕ್ ಪಕ್ಷ ನೂತನ ಗವರ್ನರ್ ಆಗಿ ಆಯ್ಕೆ ಮಾಡಿದೆ.

 ಮಂಗಳವಾರದಂದು ಐತಿಹಾಸಿಕ ಜಯ ಸಾಧಿಸುವ ಮೂಲಕ ಸ್ಟೇಸಿ ಜಾರ್ಜಿಯಾದ ಗವರ್ನರ್ ಸ್ಥಾನಕ್ಕೆ ಮೊಟ್ಟಮೊದಲ ಕರಿಯ ಹಾಗೂ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಗವರ್ನರ್ ಸ್ಥಾನಕ್ಕೆ ಸ್ಟೇಸಿ ಅಬ್ರಹಾಂ ಮತ್ತು ಸ್ಟೇಸಿ ಇವಾನ್ಸ್ ಮಧ್ಯೆ ತೀವ್ರ ಪೈಪೋಟಿಯಿದ್ದರೂ ಅಂತಿಮವಾಗಿ 44ರ ಹರೆಯದ ಅಬ್ರಹಾಂ ಜಯಗಳಿಸುವ ಮೂಲಕ ದೇಶದ ಮೊಟ್ಟಮೊದಲ ಅಫ್ರಿಕನ್-ಅಮೆರಿಕನ್ ಗವರ್ನರ್ ಆಗಿ ಆಯ್ಕೆಯಾದರು.

ಹಲವು ದಶಕಗಳಿಂದ ರಿಪಬ್ಲಿಕನ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಹಳೆ ಬಿಳಿಯ ಮತದಾರರನ್ನು ಓಲೈಸಲು ನಿರಾಕರಿಸಿದ ಸ್ಟೇಸಿ, ಯುವ ಮತದಾರರನ್ನು ಮತ್ತು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದ ಬಿಳಿಯೇತರ ಮತದಾರರನ್ನು ಮತಗಟ್ಟೆಗೆ ಬರುವಂತೆ ಮಾಡುವ ಮೂಲಕ ಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News