ಮೇ 29: ಮಣಿಪಾಲದಲ್ಲಿ ಸ್ಮತಿ ದಿನ ಕಾರ್ಯಕ್ರಮ

Update: 2018-05-23 15:33 GMT

ಮಣಿಪಾಲ, ಮೇ 23: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‌ಗಳ ಜಂಟಿ ಆಶ್ರಯದಲ್ಲಿ ಮತ್ತು ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ಇವರ ಸಹಯೋಗದೊಂದಿಗೆ ಮಣಿಪಾಲದ ಮಹಾಚೇತನಗಳಾದ ಡಾ.ಟಿ.ಎಂ.ಎ. ಪೈ ಹಾಗೂ ಟಿಎ.ಪೈ ಅವರ ಸ್ಮತಿ ದಿನ ಆಚರಣೆಯು ಮೇ 29ರ ಬೆಳಗ್ಗೆ 10 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಣಿಪಾಲದ ಮಹಾನ್ ಚೇತನಗಳ ಸಂಸ್ಮರಣೆಗೈದು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಿಂಡಿಕೇಟ್ ಬ್ಯಾಂಕಿನ ವಲಯ ಕಚೇರಿಯ ಮಹಾ ಪ್ರಬಂಧಕ ಭಾಸ್ಕರ ಹಂದೆ ಅವರು ತರಕಾರಿ ಬೀಜಗಳನ್ನು ಬಿಡುಗಡೆ ಗೊಳಿಸುವರು. ತರಕಾರಿ ಬೆಳೆಸುವ ಬಗ್ಗೆ ತಾಂತ್ರಿಕ ಮಾಹಿತಿ ಯನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ ನೀಡಲಿದ್ದಾರೆ.

ಸಿಂಡಿಕೇಟ್ ಬ್ಯಾಂಕ್ ಮತ್ತು ಭಾರತೀಯ ವಿಕಾಸಟ್ರಸ್ಟಿನ ಪ್ರಾಯೋಜಕತ್ವದಲ್ಲಿ ಸಮಾರಂಭದಲ್ಲಿ ಭಾಗವಹಿಸುವವರಿಗೆಲ್ಲ ತರಕಾರಿ ಬೀಜಗಳನ್ನು ಉಚಿತವಾಗಿ ವಿತರಿಸಲಾಗು ವುದು ಎಂದು ಬಿವಿಟಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News