ದ.ಕ. ಜಿಲ್ಲೆಯಲ್ಲಿ ನಿಪಾಹ್ ವದಂತಿ: ಹಣ್ಣು ಮಾರಾಟದಲ್ಲಿ ಕುಸಿತ

Update: 2018-05-23 16:25 GMT

ಮಂಗಳೂರು, ಮೇ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಪಾಹ್ ವೈರಸ್ ಜ್ವರದ ಬಗೆಗಿನ ವದಂತಿಯಿಂದಾಗಿ ನಗರದ ಬಹುತೇಕ ಹಣ್ಣಿನ ಅಂಗಡಿಯಲ್ಲಿ ವ್ಯಾಪಾರ ಕುಸಿತವಾಗಿದೆ ಎಂದು ಹಣ್ಣಿನ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಿಪಾಹ್ ವೈರಸ್ ಸೋಂಕು ತಾಗಿದ ಬಾವಲಿಗಳು ಅಥವಾ ಪ್ರಾಣಿಗಳು ತಿಂದ ಹಣ್ಣನ್ನು ಬಳಸಿದರೆ ಹರಡುತ್ತದೆ ಹೊರತು ಹಣ್ಣನ್ನು ತಿಂದರೆ ಬರುವುದಿಲ್ಲ ಎಂದು ವೈದ್ಯರು ಹಾಗೂ ಅಧಿಕಾರಿಗಳು ವಿವಿಧ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು.

ನಗರದ ಸ್ಟೇಟ್ ಬ್ಯಾಂಕ್ ಕೇಂದ್ರ ಮಾರುಕಟ್ಟೆ ಮಂಗಳೂರು ಗ್ರಾಮಾಂತರದಲ್ಲಿರುವ ಪ್ರದೇಶಗಳಲ್ಲೂ ಹಣ್ಣಿನ ವ್ಯಾಪಾರ ಕಳೆದ ಎರಡು ದಿನಗಳಿಂದ ಕುಸಿದಿದೆ ಎಂದು ಹಣ್ಣಿನ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News