ಮೋದಿ ಬಿ.ಎ. ಡಿಗ್ರಿ ವಿವರ ಕೋರಿದ ಆರ್‌ಟಿಐ ಕಾಯ್ದೆಯ ‘ತಪ್ಪು ವ್ಯಾಖ್ಯಾನ’ ತಡೆಯುವಂತೆ ಮನವಿ

Update: 2018-05-23 17:08 GMT

ಹೊಸದಿಲ್ಲಿ, ಮೇ 23: ಪ್ರಧಾನಿ ನರೇಂದ್ರ ಮೋದಿ ಪದವಿ ಪರೀಕ್ಷೆ ಉತ್ತೀರ್ಣರಾಗಿರುವ ಪ್ರತಿಪಾದನೆ ಹಿನ್ನೆಲೆಯಲ್ಲಿ 1978ರಲ್ಲಿ ಬಿ.ಎ. ಪರೀಕ್ಷೆ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆಗೆ ಅವಕಾಶ ನೀಡುವಂತೆ ಕೋರಿ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಅರ್ಜಿಯನ್ನು ದಿಲ್ಲಿ ವಿಶ್ವವಿದ್ಯಾನಿಲಯ ತಿರಸ್ಕರಿಸಿದೆ. ಆ ಮೂಲಕ ಆರ್‌ಟಿಐಯನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ಇದನ್ನು ತಡೆಯುವಂತೆ ಕೋರಿ ಮೂವರು ಸಾಮಾಜಿಕ ಹೋರಾಟಗಾರರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ತಿರಸ್ಕರಿಸುವಂತೆ ಕೋರಿ ದಿಲ್ಲಿ ವಿಶ್ವವಿದ್ಯಾನಿಲಯ ಕಳೆದ ವರ್ಷ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿದೆ. ಮಾಹಿತಿ ಜನರ ಹಕ್ಕು ಅಭಿಯಾನದ ಪ್ರಮುಖರಾದ ಅಂಜಲಿ ಭಾರದ್ವಾಜ್, ನಿಖಿಲ್ ಡೇ ಹಾಗೂ ಅಮೃತಾ ಜೊಹ್ರಿ ತಮ್ಮ ಮನವಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯ ತಪ್ಪಾದ ವ್ಯಾಖ್ಯಾನ ತಡೆಯುವಂತೆ ಕೋರಿದರು.

ದಿಲ್ಲಿ ವಿಶ್ವವಿದ್ಯಾನಿಲಯದ ಮನಿವಿ ತಿರಸ್ಕರಿಸುವಂತೆ ಕೋರಿದ ಹೋರಾಟಗಾರರು, ವಿದ್ಯಾರ್ಥಿಗಳ ವಿವರಗಳೊಂದಿಗೆ ವಿಶ್ವವಿದ್ಯಾನಿಲಯ ನೀಡಿದ ಫಲಿತಾಂಶ ಹಾಗೂ ಅಂಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸದೇ ಇದ್ದರೆ ಸಾರ್ವಜನಿಕ ಹಿತಾಸಕ್ತಿಗೆ ತೊಂದರೆ ಉಂಟಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News