×
Ad

ಜೂ.10ರೊಳಗೆ ಬಾಕಿ ಹಣ ಪಾವತಿಗೆ ಹಜ್ ಯಾತ್ರಾರ್ಥಿಗಳಿಗೆ ಸೂಚನೆ

Update: 2018-05-24 18:35 IST

ಮಂಗಳೂರು, ಮೇ 24: ಈ ವರ್ಷ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಗ್ರೀನ್ ವಿಭಾಗಕ್ಕೆ ತಲಾ 2,63,450 ರೂ. ಮತ್ತು ಅಝೀಝಿಯ ವಿಭಾಗದ ತಲಾ 2,29,250 ರೂ. ನಿಗದಿಯಾಗಿದ್ದು, ಆ ಪೈಕಿ ಮೊದಲ ಕಂತಿನಲ್ಲಿ ತಲಾ 81,000 ರೂ. ಪಾವತಿಸಲಾಗಿದೆ. ಹಾಗಾಗಿ ಗ್ರೀನ್ ವಿಭಾಗದಲ್ಲಿ ಬಾಕಿಯುಳಿದ 1,82,450 ರೂ. ಹಾಗೂ ಅಝೀಝಿಯಾ ವಿಭಾಗದಲ್ಲಿ ಬಾಕಿಯುಳಿದ 1,48,250 ರೂ.ವನ್ನು ಪಾವತಿಸಲು ಜೂ.10ರೊಳಗೆ ಕಾಲವಕಾಶ ನೀಡಲಾಗಿದೆ ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿ ಸೂಚಿಸಿದ್ದಾರೆ ಎಂದು ಮಂಗಳೂರು ಹಜ್ ನಿರ್ವಾಹಣಾ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News