ಮೇ 28: ಎಸೆಸೆಲ್ಸಿ ಪೂರಕ ಪರೀಕ್ಷೆಯ ಶುಲ್ಕ ಪಾವತಿಗೆ ಕೊನೆಯ ದಿನ
Update: 2018-05-24 18:35 IST
ಮಂಗಳೂರು, ಮೇ 24: ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಜೂನ್‌ನಲ್ಲಿ ನಡೆಸುವ ಎಸೆಸೆಲ್ಸಿ ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ಬಾಕಿಯಿರುವ ಪುನರಾವರ್ತಿತ ವಿದ್ಯಾರ್ಥಿಗಳು ಪಾವತಿಸಿದ ಪರೀಕ್ಷಾ ಶುಲ್ಕವನ್ನು ಮೇ 28ರೊಳಗೆ ಬ್ಯಾಂಕ್‌ಗೆ ಜಮೆ ಮಾಡಬೇಕು.
ಮೇ 29ರೊಳಗೆ ಶಾಲಾ ಮುಖ್ಯಸ್ಥರು ಪಾವತಿಸಿದ ಶುಲ್ಕದ ಚಲನ್‌ನ ಮೂಲ ಪ್ರತಿಯನ್ನು ಶಿಕ್ಷಣ ಪರೀಕ್ಷಾ ಮಂಡಳಿಗೆ ರವಾನೆ ಮಾಡಲು ಮಂಡಳಿಯ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.