ಪ್ರಾಕೃತಿಕ ವಿಕೋಪ: ತುರ್ತು ವಿಪತ್ತು ನಿಯಂತ್ರಣ ಕೊಠಡಿ
ಉಡುಪಿ, ಮೇ 24: ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಯಾವುದೇ ಸಂಭಾವ್ಯ ಅನಾಹುತಗಳನ್ನು ಸಮರ್ಪಕ ವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದ್ದು, ಸಾರ್ವಜನಿಕರು ಈ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಗಳ ದೂರವಾಣಿ ಸಂಖ್ಯೆ ಹೀಗಿದೆ. ಟೋಲ್ ಫ್ರೀ ಸಂಖ್ಯೆ: 1077, ಜಿಲ್ಲಾಧಿಕಾರಿ ಕಚೇರಿ ಮಣಿಪಾಲ: 0820-2574802, ಪೊಲೀಸ್ ಇಲಾಖೆ: 2526444, ಜಿಲ್ಲಾ ಪಂಚಾಯತ್: 2574945, ಆರೋಗ್ಯ ಇಲಾಖೆ: 2536650, ಮೆಸ್ಕಾಂ ಇಲಾಖೆ: 2521201, ಶಿಕ್ಷಣ ಇಲಾಖೆ: 2574970, ತಾಲೂಕು ಕಚೇರಿ ಉಡುಪಿ: 2520417, ತಾಲೂಕು ಕಚೇರಿ ಕಾರ್ಕಳ/ಹೆಬ್ರಿ: 08258- 230201, ತಾಲೂಕು ಕಚೇರಿ ಕುಂದಾಪುರ: 08254-230357, ತಾಲೂಕು ಕಚೇರಿ ಬೈಂದೂರು: 02854-251657, ತಾಲೂಕು ಕಚೇರಿ ಬ್ರಹ್ಮಾವರ: 2560492, ತಾಲೂಕು ಕಚೇರಿ ಕಾಪು: 2591444, ಮೀನುಗಾರಿಕೆ ಇಲಾಖೆ: 2537044, ತಾಲೂಕು ಪಂಚಾಯತ್ ಉಡುಪಿ: 2520447, ತಾಲೂಕು ಪಂಚಾಯತ್ ಕುಂದಾಪುರ: 08254-230360, ತಾಲೂಕು ಪಂಚಾಯತ್ ಕಾರ್ಕಳ: 08258-230203, ಪೌರಾಯುಕ್ತರು ಉಡುಪಿ: 2520306, ಮುಖ್ಯಾಧಿಕಾರಿ ಪುರಸಬೆ ಕಾರ್ಕಳ: 08258-235664, ಮುಖ್ಯಾಧಿಕಾರಿ ಪುರಸಭೆ ಕುಂದಾಪುರ: 08254-235160, ಮುಖ್ಯಾಧಿಕಾರಿ ಪಟ್ಟಣ ಪಂ. ಸಾಲಿಗ್ರಾಮ: 2564229.