×
Ad

ಉಡುಪಿ: ಪ್ರಧಾನ ಮಂತ್ರಿ ಸ್ವಚ್ಛತಾ ಕಾರ್ಯಕ್ರಮ

Update: 2018-05-24 19:35 IST

ಉಡುಪಿ, ಮೇ 24: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವಕೇಂದ್ರ ಉಡುಪಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸಹಯೋಗದೊಂದಿಗೆ ಪ್ರಧಾನ ಮಂತ್ರಿಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಸ್ವಚ್ಛತಾ ಕಾರ್ಯಕ್ರಮವನ್ನು ಯುವ ಜನರ ಮೂಲಕ ಮಾಡಿಸಲು ನಿರ್ಣಯಿಸಲಾಗಿದೆ.

ಈ ಕಾರ್ಯಕ್ರಮ ಜುಲೈ 31ರವರೆಗೆ ಪ್ರತಿದಿನಕ್ಕೆ ಒಂದು ಗಂಟೆಯಂತೆ ಒಟ್ಟು 100 ಗಂಟೆಗಳ ಕಾಲ ನಡೆಯಲಿದ್ದು, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡಿರುವ ಯುವಕ ಮಂಡಳಿಗಳು ಹಾಗೂ ಅದರ ಸದಸ್ಯರು ಇದರಲ್ಲಿ ಪಾಲ್ಗೊಳಬಹುದಾಗಿದೆ. ಭಾಗವಹಿಸುವವರು ಜೂ.15ರ ಒಳಗೆ -sbsi.mygov.in- ಇಲ್ಲಿ ಹೆಸರ್ನು ನೋಂದಣಿ ಮಾಡಿಕೊಳ್ಳಬಹುದು.

ಗ್ರಾಮೀಣ ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ತರಬೇತಿಗಳನ್ನು ಹಮ್ಮಿಕೊಳ್ಳುವುದು, ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಗೆ ಬಗ್ಗೆ ಮಾಹಿತಿ ನೀಡುವುದು, ಸ್ವಚ್ಛತೆ ಅರಿವು ಮೂಡಿಸುವ ಬೀದಿ ನಾಟಕಗಳನ್ನು ಮಾಡಿಸುವುದು, ರ್ಯಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ನೈರ್ಮಲ್ಯಕ್ಕೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಶೌಚಾಲಯ, ಕೈತೊಳೆಯುವಿಕೆ, ನೈರ್ಮಲ್ಯದ ಅರಿವು ಇತ್ಯಾದಿಗಳನ್ನು ಬಳಸಿಕೊಂಡು ಉತ್ತಮ ನೈರ್ಮಲ್ಯ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಮನೆ ಮನೆಗೆ ತೆರಳಿ ನೈರ್ಮಲ್ಯದ ಬಗ್ಗೆ ತಿಳುವಳಿಕೆ ಮೂಡಿಸುವುದು ಇದರಲ್ಲಿ ಸೇರಿವೆ.

ಅಲ್ಲದೇ ಘನ ತ್ಯಾಜ್ಯ ನಿರ್ವಹಣೆ ಸಂಬಂಧಿತ ಚಟುವಟಿಕೆಗಳು, ತ್ಯಾಜ್ಯ ಸಂಗ್ರಹಣೆ, ಪ್ರತ್ಯೇಕತೆ, ವಿಲೇವಾರಿ ಮತ್ತು ಮುಕ್ತ ಸ್ವಚ್ಛ ವಾತಾವರಣದ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ಹಳ್ಳಿಗಳಲ್ಲಿ ಬಯಲು ಮಲ ವಿಸರ್ಜನೆ ನಿಲ್ಲಿಸಲು ನಿಗಾ ಸಮಿತಿಗಳನ್ನು ರಚಿಸುವುದು- ಈ ಎಲ್ಲಾ ಕಾರ್ಯಕ್ರಮಗಳನ್ನು ಜುಲೈ 31ರವರೆಗೆ 100 ಗಂಟೆಗಳ ಕಾರ್ಯಕ್ರಮವಾಗಿ ಮಾಡಬೇಕಾಗಿದೆ.

ಅಲ್ಲದೇ ಘನ ತ್ಯಾಜ್ಯ ನಿರ್ವಹಣೆ ಸಂಬಂಧಿತ ಚಟುವಟಿಕೆಗಳು, ತ್ಯಾಜ್ಯ ಸಂಗ್ರಹಣೆ, ಪ್ರತ್ಯೇಕತೆ, ವಿಲೇವಾರಿ ಮತ್ತು ಮುಕ್ತ ಸ್ವಚ್ಛ ವಾತಾವರಣದ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ಹಳ್ಳಿಗಳಲ್ಲಿ ಬಯಲು ಮಲ ವಿಸರ್ಜನೆ ನಿಲ್ಲಿಸಲು ನಿಗಾ ಸಮಿತಿಗಳನ್ನು ರಚಿಸುವುದು- ಈ ಎಲ್ಲಾ ಕಾರ್ಯಕ್ರಮಗಳನ್ನು ಜುಲೈ 31ರವರೆಗೆ 100 ಗಂಟೆಗಳ ಕಾರ್ಯಕ್ರಮವಾಗಿ ಮಾಡಬೇಕಾಗಿದೆ. ಕಾರ್ಯಕ್ರಮ ಅನುಷ್ಠಾನಗೊಳಿಸಿದ ಹಾಗೂ ಉತ್ತಮ ಕೆಲಸ ನಿರ್ವಹಿಸಿ ದವರಿಗೆ ಸ್ವಚ್ಛ ಭಾರತ ಬೇಸಿಗೆ ಪ್ರಾಯೋಜಿತ ಕಾರ್ಯಕ್ರಮದ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ 30,000ರೂ., ದ್ವಿತೀಯ 20,000 ರೂ. ಹಾಗೂ ತೃತೀಯ 10,000 ರೂ. ಬಹುಮಾನಗಳನ್ನು ನೀಡಲಾಗುವುದು. ರಾಜ್ಯಮಟ್ಟದಲ್ಲಿ ರೂ.50,000 ಪ್ರಥಮ, ರೂ. 30,000 ದ್ವಿತೀಯ, ರೂ. 20,000 ತೃತೀಯ ಬಹಮಾನ, ರಾಷ್ಟ್ರ ಮಟ್ಟಕ್ಕೆ ರೂ. 2,00,000 ಪ್ರಥಮ, ರೂ.1,00,000 ದ್ವಿತೀಯ ಹಾಗೂ ರೂ.50,000 ತೃತೀಯ ಬಹುಮಾನಗಳನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0820-2574992ನ್ನು ಸಂಪರ್ಕಿಸುವಂತೆ ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News