ಮೇ 28: ಉಡುಪಿಯಲ್ಲಿ ಮದುವೆ ಹೆಣ್ಣು ನಾಟಕ ಪ್ರದರ್ಶನ
Update: 2018-05-24 20:42 IST
ಉಡುಪಿ, ಮೇ 24: ಉಡುಪಿ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಮತ್ತು ಮಣಿಪಾಲದ ಸಂಗಮ ಕಲಾವಿದೆರ್ ಇವರ ಜಂಟಿ ಆಶ್ರಯದಲ್ಲಿ ಮೇ 28ರ ಸೋಮವಾರ ಸಂಜೆ 6:30ಕ್ಕೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಥಿಯೇಟರ್ ಸಮುರಾಯ್ ಕಲ್ಚರಲ್ ಟ್ರಸ್ಟ್ ಕಲಾವಿದರಿಂದ ‘ಮದುವೆ ಹೆಣ್ಣು ’ ನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕಕಾರ ಹೆಚ್.ಎಸ್. ಶಿವಪ್ರಕಾಶ್ ಅವರು ರಚಿಸಿದ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಪಬಿತ್ರಾ ರಾಭಾ ಅಸ್ಸಾಂ ಇವರದ್ದಾಗಿದೆ. ಆಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.