ಉಡುಪಿ: ಮೇ 26ರಂದು ಬಿಜೆಪಿ ವಿಜಯೋತ್ಸವ
ಉಡುಪಿ, ಮೇ 24: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ವಿಜಯೋತ್ಸವ ವಾಹನ ರ್ಯಾಲಿ ಮೇ 26ರ ಶನಿವಾರ ಅಪರಾಹ್ನ 2 ಗಂಟೆಗೆ ಪರ್ಕಳ ಹೈಸ್ಕೂಲ್ ಬಳಿ ಚಾಲನೆಗೊಂಡು ನಗರಸಭಾ ವ್ಯಾಪ್ತಿಯಲ್ಲಿ ಸಂಚರಿಸಲಿದೆ.
ರ್ಯಾಲಿಯು ಪರ್ಕಳ ಮುಖ್ಯ ರಸ್ತೆಯಾಗಿ ಮಣಿಪಾಲ- ಇಂದ್ರಾಳಿ- ಕಲ್ಸಂಕ- ಉಡುಪಿ ಸಿಟಿಬಸ್ ನಿಲ್ದಾಣ- ಬನ್ನಂಜೆ- ಕರಾವಳಿ ಬೈಪಾಸ್- ಕಲ್ಮಾಡಿ- ಮಲ್ಪೆ- ತೊಟ್ಟಂ- ಕದಿಕೆ- ಬೈಲಕೆರೆ- ಕೊಡವೂರು-ಸಂತೆಕಟ್ಟೆ- ಗುಂಡಿಬೈಲು- ಪೆರಂಪಳ್ಳಿ- ಚಕ್ರತೀರ್ಥ- ಎಂಜಿಎಂ- ಕಸ್ತೂರ್ಬಾನಗರ- ಇಂದಿರಾನಗರ- ಮಿಷನ್ ಕಂಪೌಂಡ್- ಬಿಗ್‌ಬಜಾರ್- ಕಿನ್ನಿಮೂಲ್ಕಿ- ಬಲಾಯಿಪಾದೆ- ಸಂಪಿಗೆನಗರ- ಕಡೆಕಾರು- ಕಿದಿಯೂರು- ಅಂಬಲಪಾಡಿ-ಬ್ರಹ್ಮಗಿರಿ ಸರ್ಕಲ್ -ಜೋಡುಕಟ್ಟೆ-ಸರ್ವೀಸ್ ಬಸ್ ನಿಲ್ದಾಣ-ತ್ರಿವೇಣಿ ಸರ್ಕಲ್ ಮೂಲಕ ಚಿತ್ತರಂಜನ್ ಸರ್ಕಲ್‌ನಲ್ಲಿ ಸಮಾಪನಗೊಂಡು ಸಂಜೆ 6 ಗಂಟೆಗೆ ಚಿತ್ತರಂಜನ್ ಸರ್ಕಲ್‌ನಲ್ಲಿ ಕಾರ್ಯಕರ್ತರ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಉಡುಪಿ ನಗರ ಬಿಜೆಪಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ವಿಜಯೋತ್ಸವ ವಾಹನ ರ್ಯಾಲಿಯಲ್ಲಿ ಉಡುಪಿ ನೂತನ ಶಾಸಕ ಕೆ. ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ಗ್ರಾಮಾಂತರ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಹಾಗೂ ಇತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.