ಉಡುಪಿಯಲ್ಲಿ ಶಿರ್ಡಿ ಸಾಯಿಬಾಬಾರ ಪಾದುಕೆಯ ಮೆರವಣಿಗೆ
ಉಡುಪಿ, ಮೇ 24: ಶಿರ್ಡಿ ಸಾಯಿಬಾಬ ಸಮಾಧಿಯಾಗಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೊಡವೂರಿನ ಶಿರ್ಡಿ ಶ್ರೀಸಾಯಿಬಾಬ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಶಿರ್ಡಿ ಸಾಯಿಬಾಬರ ಪಾದುಕೆ ದರ್ಶನ ಕಾರ್ಯಕ್ರಮದ ಪೂರ್ವಭಾವಿಯಾಗಿ ಶ್ರೀಪಾದುಕೆಯ ವಿಜೃಂಭಣೆ ಮೆರವಣಿಗೆಯು ಇಂದು ನಗರದ ಜೋಡುಕಟ್ಟೆಯಿಂದ ಕೊಡವೂರು ತೋಟದಮನೆವರೆಗೆ ಜರಗಿತು.
ಮಂಗಳೂರು ಮಾರ್ಗವಾಗಿ ವಾಹನದಲ್ಲಿ ಆಗಮಿಸಿದ ಪಾದುಕೆಯನ್ನು ನಗರದ ಜೋಡುಕಟ್ಟೆಯಲ್ಲಿ ಸ್ವಾಗತಿಸಲಾಯಿತು. ಬಳಿಕ ಡಯಾನ ಸರ್ಕಲ್, ಕೆಎಂ ಮಾರ್ಗ್, ಸರ್ವಿಸ್ ಬಸ್‌ನಿಲ್ದಾಣ, ಬನ್ನಂಜೆ, ಕರಾವಳಿ ಜಂಕ್ಷನ್ ಮೂಲಕ ಆದಿಉಡುಪಿವರೆಗೆ ಮೆರವಣಿಗೆ ಸಾಗಿಬಂತು. ಅಲ್ಲಿಂದ ಕೊಡ ವೂರು ಸಾಯಿಮಂದಿರಕ್ಕೆ ಪಾದಯಾತ್ರೆಯ ಮೂಲಕ ಪಾದುಕೆಯನ್ನು ತರಲಾಯಿತು. ಭಜನೆ ತಂಡ, ಡೋಲುವಾದನ, ಯಕ್ಷ ವೇಷಧಾರಿಗಳು, ವಿವಿಧ ಟ್ಯಾಬ್ಲೊಗಳು, ಕಲಶ ಹಿಡಿದ ಮಹಿಳೆಯರು, ಯುವತಿಯರು, ಜಾನಪದ, ಸಾಂಸ್ಕೃತಿಕ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಕೇಮಾರು ಶ್ರೀಈಶ ವಿಠಲದಾಸ ಸ್ವಾಮೀಜಿ, ಕೊಡ ವೂರು ತೋಟದಮನೆ ಶ್ರೀಶಿರ್ಡಿ ಸಾಯಿಬಾಬ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ, ಡಾ.ಮೋಹನ್ ಆಳ್ವ, ಉದ್ಯಮಿ ಮನೋಹರ್ ಶೆಟ್ಟಿ, ಈಶ್ವರ ಶೆಟ್ಟಿ ಚಿಟ್ಪಾಡಿ, ಶಶಿಧರ್ ಶೆಟ್ಟಿ ಎರ್ಮಾಳ್, ರವಿ ಶೆಟ್ಟಿ ಮುಂಬೈ, ಬಿ.ನಾಗರಾಜ್ ಶೆಟ್ಟಿ, ಪುರುಷೊತ್ತಮ ಪಿ.ಶೆಟ್ಟಿ, ಹರಿಯಪ್ಪ ಕೋಟ್ಯಾನ್, ರಾಮಚಂದ್ರ ಮಿಜಾರು, ಜಯಕರ ಶೆಟ್ಟಿ ಇಂದ್ರಾಳಿ, ಆನಂದ್ ಸಿ.ಕುಂದರ್, ಸುಧಾಕರ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ದೇವದಾಸ್ ಕಡೆಕಾರು, ಹರ್ಷ ಶೆಟ್ಟಿ, ಸಾಯಿ ಈಶ್ವರ್ ಶಂಕರಪುರ ಉಪಸ್ಥಿತರಿದ್ದರು.