ರೈಲಿನಡಿಗೆ ಬಿದ್ದು ಮೃತ್ಯು
Update: 2018-05-24 21:15 IST
ಕಾಪು, ಮೇ 24: ಮಲ್ಲಾರ ಗ್ರಾಮದ ಅಚಲ್ ಎಂಬಲ್ಲಿ ಮೇ 23ರಂದು ತಡರಾತ್ರಿ ವೇಳೆ ರೈಲ್ವೆ ಹಳಿಯ ಬದಿಯಲ್ಲಿ ಸುಮಾರು 50ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.
ಆಕಸ್ಮಿಕವಾಗಿ ರೈಲು ಢಿಕ್ಕಿ ಹೊಡೆದ ಪರಿಣಾಮ ಅಥವಾ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.