ಅಕ್ರಮ ಕಸಾಯಿಖಾನೆಗೆ ದಾಳಿ: ಓರ್ವನ ಸೆರೆ
Update: 2018-05-24 21:16 IST
ಕಾಪು, ಮೇ 24: ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಇಂದು ಬೆಳಗ್ಗೆ ದಾಳಿ ಮಾಡಿದ ಕಾಪು ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ಹಮ್ಮಬ್ಬ(55) ಬಂಧಿತ ಆರೋಪಿ. ಕಬೀರ್ ಮತ್ತು ರಿಜ್ವಾನ್ ಎಂಬವರು ದಾಳಿ ವೇಳೆ ಪರಾರಿಯಾಗಿದ್ದಾರೆ. ಬಂಧಿತನಿಂದ ಸುಮಾರು 20 ಕೆ.ಜಿ. ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.