×
Ad

ಮಣಿಪಾಲ; ಅಕ್ರಮ ಗಾಂಜಾ ಮಾರಾಟ: ಉತ್ತರ ಪ್ರದೇಶದ ಯುವಕನ ಸೆರೆ

Update: 2018-05-25 18:02 IST

ಮಣಿಪಾಲ, ಮೇ 25: ಮಣಿಪಾಲ ಈಶ್ವರ ನಗರ 2ನೆ ಮುಖ್ಯ ರಸ್ತೆಯ ರೀಗಲ್ ಹಿಲ್ಸ್ ಬಳಿ ಮೇ 23ರಂದು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ಸತೀಶ್ ಕುಮಾರ್ ಚೌರಾಸಿಯಾ(23) ಬಂಧಿತ ಆರೋಪಿ. ಈತನಿಂದ 42,500ರೂ. ಮೌಲ್ಯದ 2.142 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜೂ.6ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸತೀಶ್ ಕುಮಾರ್ ಮಣಿಪಾಲದ ಎಂಐಟಿಯಲ್ಲಿ 2013ರಿಂದ ಐಸಿಎಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಅದರಲ್ಲಿ ಅನುತ್ತೀರ್ಣನಾಗಿದ್ದನು ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ನಿರ್ದೇಶನದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಸೀತಾರಾಮ ಪಿ. ನೇತೃತ್ವದಲ್ಲಿ ಎಎಸ್ಸೈ ಕೇಶವ ಗೌಡ, ಸಿಬ್ಬಂದಿಗಳಾದ ಸತೀಶ್, ಕೃಷ್ಣಪ್ರಸಾದ್, ಪ್ರಸನ್ನ ಸಾಲ್ಯಾನ್, ನಾಗೇಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News