ಉಳ್ಳಾಲ ಸೇತುವೆಯಲ್ಲಿ ಸರಣಿ ಅಪಘಾತ
Update: 2018-05-25 19:46 IST
ಮಂಗಳೂರು, ಮೇ 25: ರಾ.ಹೆ. 66ರ ಉಳ್ಳಾಲ ಸೇತುವೆಯಲ್ಲಿ ಶುಕ್ರವಾರ ಮಧ್ಯಾಹ್ನ ಸರಣಿ ಅಪಘಾತ ಸಂಭವಿಸಿದೆ. ಆದರೆ, ಈ ಅಪಘಾತದಲ್ಲಿ ಯಾರಿಗೂ ಗಾಯಪಾಯವಾಗಿಲ್ಲ.
ತನ್ಮಧ್ಯೆ ಅಪಘಾತಕ್ಕೆ ಕಾರಣಕರ್ತ ಎನ್ನಲಾದ ಬಸ್ ಚಾಲಕನ ವಿರುದ್ಧ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸುಮಾರು 1:30ಕ್ಕೆ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದ ಬಸ್ಸೊಂದು ಕೆಟ್ಟು ನಿಂತಿದ್ದ ಲಾರಿಯೊಂದನ್ನು ಓವರ್‌ಟೇಕ್ ಮಾಡುವ ಭರಾಟೆ ನಡೆಸಿತು. ಈ ಸಂದರ್ಭ ಬಸ್ಸಿನ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನ ಹಿಂಬದಿಯಲ್ಲಿದ್ದ ಕಾರಿನ ಚಾಲಕ ಕೂಡಾ ಹಠಾತ್ ಬ್ರೇಕ್ ಹಾಕಿದರು. ಅದರ ಹಿಂದಿದ್ದ ಇತರ ಮೂರು ಕಾರುಗಳು ಕೂಡಾ ಬ್ರೇಕ್ ಹಾಕಿದ ಪರಿಣಾಮ ನಾಲ್ಕು ಕಾರುಗಳು ಒಂದರ ಹಿಂದೆ ಒಂದರಂತೆ ಢಿಕ್ಕಿಗೊಳಗಾಯಿತು. ನಾಲ್ಕು ಕಾರಿಗೂ ಹಾನಿಯಾಗಿದೆ. ಆದರೆ, ಯಾರಿಗೂ ಗಾಯವಾಗಿಲ್ಲ.