ರಾಮಚಂದ್ರ ಕೆ. ನೆಲ್ಯಾಡಿ ಅವರಿಗೆ ಪಿಎಚ್‌ಡಿ ಪದವಿ
Update: 2018-05-25 19:52 IST
ಬಂಟ್ವಾಳ, ಮೇ 25: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಕೆ. ನೆಲ್ಯಾಡಿ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.
ಅವರು ದೈಹಿಕ ಶಿಕ್ಷಣ ಮತ್ತು ಕ್ರೀಡಾವಿಜ್ಞಾನ ವಿಭಾಗಕ್ಕೆ ಸಂಬಂಧಿಸಿದಂತೆ "ಅನಾಲಿಸಿಸ್ ಆಫ್ ಅಂಥ್ರೋಪೊಮೆಟ್ರಿಕ್ ಕ್ಯಾರೆಕ್ಟರ್ ಸ್ಟಿಕ್ ಆ್ಯಂಡ್ ಫರ್‌ಫಾರ್‌ರ್ಮಸ್ ಆಫ್ ಕಾಲೇಜು ಅಥ್ಲೇಟ್ಸ್" ಎಂಬ ಮಹಾಪ್ರಬಂಧಕ್ಕೆ ಅಂತಾರಾಜ್ಯ ವಿಶ್ವವಿದ್ಯಾಲಯ ಡಾಕ್ಟರೇಟ್ ದ್ರಾವಿಡ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಇವರು ಅಣ್ಣಾಮಲೈ ವಿಶ್ವವಿದ್ಯಾಲಯದ ಶಾರೀರಿಕ ಶಿಕ್ಷಕ ವಿಭಾಗದ ಪ್ರಾಧ್ಯಾಪಕ ಡಾ ಪಿ.ವಿ ಶೆಲ್ವಂ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದರು.