×
Ad

ಮೇ 27: ಸಂವಿಧಾನ ಸಂರಕ್ಷಣಾ ದಿನಾಚರಣೆ

Update: 2018-05-25 19:54 IST

ಮಂಗಳೂರು, ಮೇ 25: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನವಾದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 127ನೆ ಜಯಂತಿಯ ಅಂಗವಾಗಿ ಸಂವಿಧಾನ ಸಂರಕ್ಷಣಾ ದಿನದ ಘೋಷಣೆಯೊಂದಿಗೆ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಸಾಮರಸ್ಯ ಸಮಾವೇಶ ಮೇ 27ರಂದು ಸಂಜೆ 4 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ.

ಬಹುಜನರಿಗೆ ಸ್ವಾಭಿಮಾನದ ಬದುಕನ್ನು ನೀಡಿ ಅಸ್ಪಶ್ಯತೆ ಅಸಮಾನತೆಯಿಂದ ಮುಕ್ತಿ ಪಡೆಯಲು ತಮ್ಮ ಜೀವನವನ್ನೇ ಮುಡಿಪಿಟ್ಟ ಬಾಬಾ ಸಾಹೇಬ ಭಾರತ ದೇಶದ ಸಂವಿಧಾನದ ಕರ್ತೃ .ಈ ಸಂವಿಧಾನಕ್ಕೆ ಅಪಾಯ ಉಂಟಾಗುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಈ ನೆಲೆಯಲ್ಲಿ ಸಂವಿಧಾನ ಪ್ರೇಮಿಗಳು ಒಗ್ಗಟ್ಟಾಗ ಬೇಕೆನ್ನುವ ಕರೆಯನ್ವಯ ಬಾಬಾ ಸಾಹೇಬರ ಜನ್ಮ ದಿನಾಚರಣೆಯನ್ನು ಸಂವಿಧಾನ ರಕ್ಷಣಾ ದಿನವನ್ನಾಗಿ ಆಚರಿಸಲು ದಸಂಸ ತೀರ್ಮಾನಿಸಿದೆ.

ಕಾರ್ಯಕ್ರಮದ ಪ್ರಯುಕ್ತ ಮೇ 27ರಂದು ಸಂಜೆ 3.30 ಗಂಟೆಗೆ ಎಕ್ಕೂರಿನಿಂದ ಯುವ ಜನರ ಆಕರ್ಷಕ ಮೆರವಣಿಗೆ ಪುರಭವನದ ವರೆಗೆ ನಡೆಯಲಿದೆ. 4.30 ನಗರದ ಪುರಭವನದ ಬಳಿ ಪರಿಶಿಷ್ಟ ಜಾತಿ, ಪಂಗಡಗಳ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News