ಕಾಳಿಪ್ರಸಾದ್‌ಗೆ ಪಿಎಚ್‌ಡಿ ಪದವಿ
Update: 2018-05-25 19:55 IST
ಕೊಣಾಜೆ, ಮೇ 25: ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿ ಸಿ.ಎಸ್.ಕಾಳಿಪ್ರಸಾದ್ ಅವರು ಮಂಡಿಸಿದ ‘ಸ್ಡಡೀಸ್ ಆನ್ ಟ್ರಾನ್ಸ್‌ಪೋರ್ಟ್ ಆಂಡ್ ಡಿಸ್ಟ್ರಿಬ್ಯೂಷನ್ ಆಫ್ ರೇಡಿಯೋ ನ್ಯೂಕ್ಲೈಡ್ಸ್ ಇನ್ ಮೇಜರ್ ರಿವರ್ ಎಕೋ ಸಿಸ್ಟಮ್ ಆಫ್ ಸೌಥ್ ಕರ್ನಾಟಕ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ.
ಹಾಸನ ಜಿಲ್ಲೆಯ ಬಾಗೇಶ್‌ಪುರ ಗ್ರಾಮದ ಬಿ.ಶಿವಾನಂದಪ್ಪ ಮತ್ತು ಆರ್.ಲೀಲಾವತಿ ದಂಪತಿಗಳ ಪುತ್ರನಾಗಿರುವ ಇವರು ವಿವಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೈ.ನಾರಾಯಣ ಅವರು ಮಾರ್ಗದರ್ಶನ ನೀಡಿದ್ದರು.