ವಿದ್ಯುತ್ ಶಾಕ್: ಮಹಿಳೆ ಮೃತ್ಯು
Update: 2018-05-25 21:31 IST
ಕಾರ್ಕಳ, ಮೇ 25: ವಿದ್ಯುತ್ ಶಾಕ್‌ನಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ 8:30ರ ಸುಮಾರಿಗೆ ನೀರೆ ಗ್ರಾಮದ ಕೆರೆಪಲ್ಕೆ ಎಂಬಲ್ಲಿ ನಡೆದಿದೆ.
ಮೃತರನ್ನು ಕೆರೆಪಲ್ಕೆಯ ನಿವಾಸಿ ಅಪ್ಪಿಮೂಲ್ಯ(60) ಎಂದು ಗುರುತಿಸ ಲಾಗಿದೆ. ಇವರು ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದು, ಇವರು ಮನೆಯ ನೀರಿನ ಟ್ಯಾಂಕಿಗೆ ನೀರು ತುಂಬಿಸಲು ಪಂಪ್ ಸ್ವಿಚ್ ಹಾಕುವಾಗ ದೇಹಕ್ಕೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆನ್ನಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.