ಅಂಗಡಿಗೆ ನುಗ್ಗಿ ಸೊತ್ತು ಕಳವು
Update: 2018-05-25 21:32 IST
ಕುಂದಾಪುರ, ಮೇ 25: ಕಾವ್ರಾಡಿ ಗ್ರಾಮದ ಕಂಡ್ಲೂರು ಎಂಬಲ್ಲಿ ಮೇ 24ರಂದು ರಾತ್ರಿ ವೇಳೆ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಗೇರು ಬೀಜ ಹಾಗೂ ಅಡಕೆಯನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಾವ್ರಾಡಿ ಚರ್ಚ್ ಸಮೀಪದ ನಿವಾಸಿ ವಿಕ್ಟರ್ ಡಿಕೋಸ್ಟ ಎಂಬವರ ಮಂಗಳ ಸ್ಟೋರ್ಸ್ ಎಂಬ ಅಂಗಡಿಯ ಬೀಗ ತೆಗೆದು ಒಳನುಗ್ಗಿದ ಕಳ್ಳರು 10,000ರೂ. ಮೌಲ್ಯದ 73ಕೆ.ಜಿ. ಗೇರುಬೀಜ ಮತ್ತು 5 ಕೆ.ಜಿ. ಅಡಿಕೆಯನ್ನು ಕಳವು ಮಾಡಿ ಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.