×
Ad

ಹಳೆ ದ್ವೇಷದ ಹಿನ್ನಲೆ ಕೊಲೆಗೆ ಯತ್ನ: ಆರೋಪಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

Update: 2018-05-25 21:33 IST

ಮೈಸೂರು,ಮೇ.25: ಹಳೆ ದ್ವೇಷದಲ್ಲಿ ಕೊಲೆಗೆ ಯತ್ನಿಸಿದ ಆರೋಪಿಗೆ 4 ವರ್ಷ ಜೈಲು ಶಿಕ್ಷೆ, 10 ಸಾವಿರ ದಂಡ ವಿಧಿಸಿ ಮೈಸೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೆ.ಆರ್.ನಗರದ ಬಸವಪುರ ಗ್ರಾಮದ ಹೇಮಚಂದ್ರನೇ ಶಿಕ್ಷೆಗೆ ಗುರಿಯಾದ ವ್ಯಕ್ತಿಯಾಗಿದ್ದು, 2012ರ ಸೆ.16 ರಂದು ಹೇಮಚಂದ್ರ, ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆಗೆ ಯತ್ನಿಸಿದ್ದ. ವಿರೂಪಾಕ್ಷ ಎಂಬುವವನ  ಮೇಲೆ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಯತ್ನಿಸಿದ್ದ.
ಹೇಮಚಂದ್ರ ಹಾಗೂ ಸ್ನೇಹಿತರು ಪರಾರಿಯಾಗಲು ಯತ್ನಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ನಗರ ಠಾಣೆ ಪೊಲೀಸರು, ನಂತರ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. 

ನಾಲ್ವರು ಆರೋಪಿಗಳ ಪೈಕಿ ಹೇಮಚಂದ್ರನ ಮೇಲಿನ ಆರೋಪ ಸಾಬೀತಾಗಿತ್ತು. ಉಳಿದ ಮೂವರ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ  ಬಿಡುಗಡೆಯಾಗಿದ್ದರು. ಹೇಮಚಂದ್ರನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  ನ್ಯಾಯಮೂರ್ತಿ ಎಸ್.ಸುಧೀಂದ್ರ ನಾಥ್ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಪರವಾಗಿ ಅಜಿತ್ ಕುಮಾರ್ ಡಿ. ಹಮಿಗಿ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News