ಗಡಿಪಿಲ: ರೈಲ್ವೇ ಮೇಲ್‌ಸೇತುವೆಗೆ ಆಕ್ಟೀವಾ ಢಿಕ್ಕಿ: ಸವಾರ ಮೃತ್ಯು
Update: 2018-05-25 21:53 IST
ಪುತ್ತೂರು, ಮೇ 25: ಗಡಿಪಿಲ ಸಮೀಪದ ರೈಲ್ವೇ ಮೇಲ್‌ಸೇತುವೆಗೆ ಆಕ್ಟೀವಾ ಢಿಕ್ಕಿಯಾಗಿ ಪುತ್ತೂರಿನ ಪೋಸ್ಟ್ ಮೇನ್ ಒಬ್ಬರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಪುತ್ತೂರು ತಾಲೂಕಿನ ಕಾಣಿಯೂರು ಮಠತ್ತಾರು ಚೋಮ ಎಂಬವರ ಪುತ್ರ ತನಿಯ ಮಾಯಿಲ (55) ಎಂಬವರು ಮೃತಪಟ್ಟವರು. ತನಿಯರವರು ಪ್ರತಿದಿನ ಪುತ್ತೂರಿಗೆ ಆಕ್ಟೀವಾದಲ್ಲಿ ಬಂದು ಅಂಚೆ ಕೆಲಸ ನಿರ್ವಹಿಸುತ್ತಿದ್ದರು. ಮೇ 24ರಂದು ಅವರು ಸಂಜೆ ಮನೆಗೆ ಹೋಗುತ್ತಿದ್ದ ವೇಳೆ ಗಡಿಪಿಲ ಸಮೀಪದ ರೈಲ್ವೇ ಮೇಲ್‌ಸೇತುವೆಗೆ ಅವರ ಆಕ್ಟೀವಾ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಅವರು ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ಕರೆತರುವ ವೇಳೆ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.